ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ:ಶಿಮಂತೂರು ಶ್ರೀ ಆದಿ ಜನಾರ್ಧನ ದೇವಸ್ಥಾನದ ವರ್ಷಾವಧಿ ಜಾತ್ರಾಮಹೋತ್ಸವ

ಮುಲ್ಕಿ: ಶಿಮಂತೂರು ಶ್ರೀ ಆದಿ ಜನಾರ್ಧನ ದೇವಸ್ಥಾನದ ವರ್ಷವಾದಿ ಜಾತ್ರಾಮಹೋತ್ಸವದ ಪ್ರಯುಕ್ತ ಲೋಕಕಲ್ಯಾಣಾರ್ಥ ಕವಾಗಿ ಭಜನೆ ಸಂಕೀರ್ತನೆಯೊಂದಿಗೆ ಶ್ರೀರಾಮ ಭಜನಾ ಮಂದಿರ ಅಂಗಾರ ಗುಡ್ಡೆಯಿಂದ ಪಾದಯಾತ್ರೆಯನ್ನು ಮಾಡಲಾಯಿತು

ಶ್ರೀರಾಮ ಭಜನಾ ಮಂಡಳಿ, ಶಿಮಂತೂರು ಭಜನಾ ಮಂಡಳಿ, ಜಾರಂದಾಯ ಭಜನಾ ಮಂಡಳಿ, ದುರ್ಗಾಪರಮೇಶ್ವರಿ ಭಜನಾ ಮಂಡಳಿ ಹಾಗೂ ಇನ್ನಿತರ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.

ಭಗತ್ ಸಿಂಗ್ ಯುವಕ ವೃಂದದ ಅಧ್ಯಕ್ಷರಾದ ಶಶಿಕುಮಾರ್ ಶ್ರೀರಾಮ ಭಜನಾ ಮಂಡಳಿಯ ಅಧ್ಯಕ್ಷರಾದ ಹರಿಕೃಷ್ಣ ದಾಸ್ ಅತಿಕಾರಿಬೆಟ್ಟು ಗ್ರಾಮಪಂಚಾಯತಿ ಸದಸ್ಯರಾದ ಕೃಷ್ಣ ಶೆಟ್ಟಿಗಾರ್, ಯೋಗೇಶ್ ಆಚಾರಿ, ತಾರನಾಥ ದೇವಾಡಿಗ, ಸತೀಶ್ ಆಚಾರಿ, ಸಂದೇಶ ಆಚಾರಿ, ಶಂಕರ, ಚಂದ್ರಸ್ ಶಿಮಂತೂರು, ಮುದ್ದು ಶೆಟ್ಟಿ ಕೆಂಚನಕೆರೆ ಶರತ್ ಕುಬೆವೂರು, ವಿಜಯ್ ಭಂಡಾರಿ ತಾರಾನಾಥ್ ಶೆಟ್ಟಿಗಾರ್ ಸಂಪತ್ ಕುಮಾರ್ ಸಂತೋಷ್ ಸುಧೀರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಬಳಿಕ ಶಿಮಂತೂರು ಆದಿ ಜನಾರ್ಧನ ದೇವಸ್ಥಾನದಲ್ಲಿ ಪಾದಯಾತ್ರೆಯ ಭಕ್ತರಿಗೆ ಕ್ಷೇತ್ರದ ವತಿಯಿಂದ ಪ್ರಸಾದ ವಿತರಿಸಲಾಯಿತು. ಈ ಸಂದರ್ಭ ಶಿಮಂತೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಚಂದ್ರಹಾಸ ಶೆಟ್ಟಿ ಮಾತನಾಡಿ ಲೋಕಕಲ್ಯಾಣಕ್ಕಾಗಿ ಪಾದಯಾತ್ರೆಯ ಮೂಲಕ ಭಕ್ತರು ಕ್ಷೇತ್ರಕ್ಕೆ ಬಂದಿದ್ದಾರೆ. ದೇವರು ಎಲ್ಲರಿಗೂ ಒಳಿತನ್ನು ಉಂಟು ಮಾಡಲಿ ಎಂದು ಶುಭ ಹಾರೈಸಿದರು

Edited By : Manjunath H D
Kshetra Samachara

Kshetra Samachara

28/02/2021 03:46 pm

Cinque Terre

6.15 K

Cinque Terre

0

ಸಂಬಂಧಿತ ಸುದ್ದಿ