ಬಂಟ್ವಾಳ: ಕೊರೊನಾದಿಂದಾಗಿ ವೃತ್ತಿಪರ ಕಲಾವಿದರಿಗೆ ಸಾಕಷ್ಟು ತೊಂದರೆಯಾಗಿದ್ದು, ಕಲೋತ್ಸವದಂತಹ ಕಾರ್ಯಕ್ರಮ ಕಲಾವಿದರಿಗೆ ಮತ್ತೆ ಚೈತನ್ಯ ನೀಡಿದೆ ಎಂದು ಹಿರಿಯ ರಂಗನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಚಿಣ್ಣರ ಲೋಕ- ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಬಂಟ್ವಾಳ ಆಶ್ರಯದಲ್ಲಿ ಬಿ.ಸಿ.ರೋಡಿನ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ಕಲೋತ್ಸವ- 2021ರ ಅಂಗವಾಗಿ ನಡೆದ ನಾಟಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಂದರ್ಭ ತರಬೇತುದಾರರಾದ ಸಂಧ್ಯಾ ಕಿಶೋರ್ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ತಾಲೂಕು ಸಮಿತಿ ಅಧ್ಯಕ್ಷ ಬೇಬಿ ಕುಂದರ್, ಹಿರಿಯ ರಂಗಭೂಮಿ ಕಲಾವಿದ ಮಂಜು ವಿಟ್ಲ, ಚಲನಚಿತ್ರ ಮಂಡಳಿ ಸದಸ್ಯ ರಾಜೇಶ್ ಕುಡ್ಲ, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಜಿಪಂ ಸದಸ್ಯ ತುಂಗಪ್ಪ ಬಂಗೇರ, ಗೌರವ ಸಲಹೆಗಾರ ಅಶೋಕ್ ಶೆಟ್ಟಿ ಸರಪಾಡಿ, ಕಾರ್ಯಕಾರಿ ಸಮಿತಿ ಸದಸ್ಯೆ ಸೌಮ್ಯ ಭಂಡಾರಿಬೆಟ್ಟು ಉಪಸ್ಥಿತರಿದ್ದರು.
ನಾಟಕೋತ್ಸವ ಸಂಚಾಲಕ ರತ್ನದೇವ್ ಪುಂಜಾಲಕಟ್ಟೆ ಸ್ವಾಗತಿಸಿದರು. ಸ್ಥಾಪಕ ಅಧ್ಯಕ್ಷ ಮೋಹನ್ ದಾಸ್ ಕೊಟ್ಟಾರಿ ಪ್ರಸ್ತಾವಿಸಿದರು. ನಿರ್ದೇಶಕ ಲೋಕೇಶ್ ಸುವರ್ಣ ವಂದಿಸಿದರು. ಕಲಾವಿದ ಎಚ್ಕೆ ನಯನಾಡು ನಿರೂಪಿಸಿದರು.
Kshetra Samachara
17/02/2021 07:25 pm