ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: 8 ನೇ ವರ್ಷದ ತಿರುವೈಲುಗುತ್ತು ಸಂಕುಪೂಂಜ-ದೇವುಪೂಂಜ ಜೋಡುಕರೆ ಕಂಬಳಕ್ಕೆ ಚಾಲನೆ..

ಮಂಗಳೂರು: ಕೊರೊನಾ ನಂತರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂಬಳ ಗೌಜಿ ಶುರುವಾಗಿದೆ.ಬಂಟ್ವಾಳ ತಾಲೂಕಿನ ಹೊಕ್ಕಾಡಿಗೋಳಿ ‘ವೀರ-ವಿಕ್ರಮ’ಜೋಡುಕರೆ ಬಯಲು ಕಂಬಳ ,ಐಕಳ ಕಾಂತಬಾರೆ,ಬೂಧಬಾರೆ ಕಂಬಳದ ಬಳಿಕ ಇದೀಗ ಮೂರನೇ ಕಂಬಳ ತಿರುವೈಲು ಗುತ್ತಿನಲ್ಲಿ ನಡೆಯುತ್ತಿದೆ.

ಮಂಗಳೂರು ನಗರ ವ್ಯಾಪ್ತಿಯ ವಾಮಂಜೂರು ತಿರುವೈಲುಗುತ್ತಿನ ಹೊನಲು ಬೆಳಕಿನ ಸಂಕುಪೂಂಜ-ದೇವುಪೂಂಜ ಜೋಡುಕರೆ ಕಂಬಳ ಅರಂಭಗೊಂಡಿದೆ. ವಾಮಂಜೂರು ತಿರುವೈಲು ಶ್ರೀ ಅಮೃತೇಶ್ವರ ದೇವಸ್ಥಾನದ ಎದುರಿನ ತಿರುವೈಲು ಗುತ್ತಿನ ಕಂಬಳ ಗದ್ದೆಯಲ್ಲಿ ತುಳುನಾಡಿನ ತಿರುವೈಲೋತ್ಸವ ಸಂಭ್ರಮ ವೈಭವದಿಂದ ನಡೆಯುತ್ತಿದೆ, ತಿರುವೈಲು ಗುತ್ತಿನ 8 ನೇ ವರ್ಷದ ಕಂಬಳದಲ್ಲಿ 160ಕ್ಕೂ ಮಿಕ್ಕಿ ಕೋಣಗಳು ಭಾಗವಹಿಸುವ ನಿರೀಕ್ಷೆ ಇದೆ ಎನ್ನುತ್ತಾರೆ ಕಂಬಳ ಆಯೋಜಕರು, ಅಮೃತೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥಿಸಿದ ಬಳಿಕ ಕಂಬಳ ನಡೆಯುವ ಜೋಡು ಕರೆಯಲ್ಲಿ ಕರಾವಳಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಗಣೇಶ್ ರಾವ್ ಕಂಬಳವನ್ನು ಉದ್ಘಾಟಿಸಿದ್ರು, ಈ ವೈಭವದ ಉದ್ಘಾಟನಾ ಸಮಾರಂಭದಲ್ಲಿ ಹಲವು ಮಂದಿ ರಾಜಕೀಯ ಹಾಗೂ ಧಾರ್ಮಿಕ ಮುಖಂಡರು ಸೇರಿದಂತೆ ಕಂಬಳ ಸಮಿತಿ ಸದಸ್ಯರು ಹಾಗೂ ಕಂಬಳ‌ ಅಭಿಮಾನಿಗಳು ಭಾಗವಹಿಸಿದ್ದರು...

Edited By : Manjunath H D
Kshetra Samachara

Kshetra Samachara

13/02/2021 06:27 pm

Cinque Terre

16.09 K

Cinque Terre

0

ಸಂಬಂಧಿತ ಸುದ್ದಿ