ಮುಲ್ಕಿ: ಪ್ರಗತಿಪರ ಕೃಷಿಕ, ಶಿಕ್ಷಣ ತಜ್ಞ, ಸಾಮಾಜಿಕ ನೇತಾರ ಕೆ.ಸೋಮಪ್ಪ ಸುವರ್ಣ ಅವರ ಒಂಬತ್ತನೇ ವರ್ಷದ ಸಂಸ್ಮರಣೆ ಹಾಗೂ 2021 ನೇ ಸಾಲಿನ ಸಾಧಕರಿಗೆ ಪ್ರಶಸ್ತಿ ಪ್ರದಾನ ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಕ.ಸಾ.ಪ. ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ವಹಿಸಿ ಮಾತನಾಡಿ, ದಿ. ಸೋಮಪ್ಪ ಸುವರ್ಣ ಅವರ ಆದರ್ಶ ಇಂದಿನ ಯುವ ಜನಾಂಗ ಪಾಲಿಸಿ ಜೀವನದಲ್ಲಿ ಮುನ್ನಡೆಯಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ದಿ.ಸೋಮಪ್ಪ ಸುವರ್ಣ ಅವರು ಪ್ರಾಮಾಣಿಕ ರಾಜಕಾರಣಿಯಾಗಿ ಬಡವರಿಗೆ ಮಾಡಿದ ಸೇವೆ ಗಮನಾರ್ಹ. ಶ್ರೇಷ್ಠ ಜನನಾಯಕರಾದ ಅವರು ಸರಳ ಸಜ್ಜನಿಕೆ ವ್ಯಕ್ತಿಯಾಗಿದ್ದು, ಅಜಾತಶತ್ರು ಎಂದರು.
ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ರಮೇಶ ಅಮೀನ್ ಕೊಕ್ಕರಕಲ್, ದಿ. ಸೋಮಪ್ಪ ಸುವರ್ಣ ನೆರಳು ನೆಂಪು ಸಮಿತಿ ಸದಸ್ಯರಾದ ಎಚ್. ವಿ. ಕೋಟ್ಯಾನ್ ಮುಲ್ಕಿ, ಪ್ರಮೋದ್ ಕುಮಾರ್ ಕಿನ್ನಿಗೋಳಿ, ಜೊಸ್ಸಿ ಪಿಂಟೊ ಕಿನ್ನಿಗೋಳಿ, ವೈ.ಎನ್. ಸಾಲ್ಯಾನ್, ಹರೀಂದ್ರ ಸುವರ್ಣ, ಚೆನ್ನಕೇಶವ ಸುವರ್ಣ, ಡಾ. ಅಚ್ಚುತ ಕುಡ್ವ, ವೆಂಕಟೇಶ ಹೆಬ್ಬಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಲ್ಕಿ ವಿಜಯ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಸ್ಯಾಮ್ ಮಾಬೆನ್ "ಸೋಮಪ್ಪ ಸುವರ್ಣರ ನೆಂಪು" ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೆ. ಸೋಮಪ್ಪ ಸುವರ್ಣ ನೆರಳು - ನೆಂಪು ಸಮಿತಿ ವತಿಯಿಂದ 2021 ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾದ ಸಾಧಕರಾದ ಎಚ್ .ಜಿ. ನಾಗರಾಜ ನಾಯಕ್(ಶಿಕ್ಷಣ ಕ್ಷೇತ್ರ), ಕಾರ್ನಾಡು ಮೈಮುನಾ ಫೌಂಡೇಶನ್ ನಿರ್ದೇಶಕ ಮೊಹಮ್ಮದ್ ಅಸಿಫ್ (ಸಮಾಜಸೇವೆ), ಲಾರೆನ್ಸ್ ಡಿಸೋಜ ಕಿನ್ನಿಗೋಳಿ(ಕೃಷಿ ಕ್ಷೇತ್ರ) ಅವರನ್ನು ಗೌರವಿಸಲಾಯಿತು.
ಸಮಿತಿಯ ಪ್ರಮೋದ್ ಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ಚಂದ್ರಶೇಖರ ಸುವರ್ಣ ವಂದಿಸಿದರು. ಜೊತೆ ಕಾರ್ಯದರ್ಶಿ ವಿಜಯಕುಮಾರ್ ಕುಬೆವೂರು ನಿರೂಪಿಸಿದರು.
Kshetra Samachara
28/01/2021 08:05 pm