ಮೂಲ್ಕಿ:ಮತದಾನ ನಮ್ಮ ಮೂಲಭೂತ ಹಕ್ಕಾಗಿದ್ದು ದೇಶದ ಪ್ರಗತಿ ಮತ್ತು ಪ್ರಜೆಗಳ ಆಶೋತ್ತರಗಳಿಗೆ ಪೂರಕವಾಗಿ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುವ ಪ್ರತಿನಿಧಿಯನ್ನು ಆಯ್ಕೆ ಮಾಡುವುದು ನಮ್ಮ ಜವಾಬ್ದಾರಿಯೆಂದು ಮೂಲ್ಕಿ ವಿಜಯ ಕಾಲೇಜು ಪ್ರಾಂಶುಪಾಲ ಡಾ| ಕೆ ನಾರಾಯಣ ಪೂಜಾರಿ ಹೇಳಿದರು.
ಮೂಲ್ಕಿಯ ವಿಜಯ ಕಾಲೇಜಿನ ವೋಟರ್ ಲಿಟರಸಿ ಕ್ಲಬ್ ಹಾಗೂ ಎನ್ ಎಸ್ ಎಸ್ ಆಶ್ರಯದಲ್ಲಿ ಸೋಮವಾರ ವಿಜಯ ಕಾಲೇಜಿನಲ್ಲಿ ಜರಗಿದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು 18 ವರ್ಷ ಮೇಲ್ಪಟ್ಟ ಎಲ್ಲ ಯುವಕ-ಯುವತಿಯರು ಮತದಾನಕ್ಕೆ ನೋಂದಣಿ ಮಾಡಿಸಿ, ಮತದಾನದ ಹಕ್ಕನ್ನು ಚಲಾಯಿಸುವುದರೊಂದಿಗೆ ಇತರರಲ್ಲೂ ಮತದಾನದ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಹೇಳಿದರು.
ಮೂಲ್ಕಿ ನಗರ ಪಂಚಾಯತ್ ಸದಸ್ಯ ಬಾಲಚಂದ್ರ ಕಾಮತ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು ಕಾಲೇಜಿನ ಎನ್ ಎಸ್ ಎಸ್ ಅಧಿಕಾರಿ ಜಿತೇಂದ್ರ ವಿ ರಾವ್ ಮತದಾನದ ಪ್ರಮಾಣ ವಚನ ಬೋಧಿಸಿ, ಕಾರ್ಯಕ್ರಮ ನಿರೂಪಿಸಿದರು. ವೋಟರ್ ಲಿಟರಸಿ ಕ್ಲಬ್‌ನ ಅಧ್ಯಾಪಕ ಸಲಹೆಗಾರರಾದ ಕು| ಸ್ವಾತಿ ಬಿ ಶೆಟ್ಟಿ ಉಪಸ್ಥಿತರಿದ್ದರು.
Kshetra Samachara
25/01/2021 09:13 pm