ಮುಲ್ಕಿ: ಹಳೆಯಂಗಡಿ ಸಮೀಪದ ಪಾವಂಜೆ ದೇವಾಡಿಗ ಸಮಾಜ ಸೇವಾ ಸಂಘ, ದೇವಾಡಿಗ ಯುವ ವೇದಿಕೆ, ಮಹಿಳಾ ವೇದಿಕೆ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿ ವೇತನ ವಿತರಣೆ ಹಾಗೂ ಸಾಧಕರಿಗೆ ಗೌರವ ಅರ್ಪಣೆ ಪಾವಂಜೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಸಭಾಮಂಟಪದಲ್ಲಿ ನಡೆಯಿತು. ಸಮಾರಂಭವನ್ನು ಬಾರ್ಕೂರು ಶ್ರೀ ಏಕನಾಥೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಪ್ರಧಾನ ಕಾರ್ಯದರ್ಶಿ ಗಣೇಶ್ ಬ್ರಹ್ಮಗಿರಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಪಾವಂಜೆ ದೇವಾಡಿಗ ಸಮಾಜ ಸೇವಾ ಸಂಘ ಅಧ್ಯಕ್ಷ ರಾಮದಾಸ್ ಪಾವಂಜೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೋಟ ದೇವಾಡಿಗರ ಸಂಘದ ಅಧ್ಯಕ್ಷ ನರಸಿಂಹ ದೇವಾಡಿಗ ನೆಲ್ಲಿಬೆಟ್ಟು, ತಲ್ಲೂರು ಸಪ್ತಸ್ವರ ಸಹಕಾರಿ ಸಂಘ ಕಾರ್ಯ ನಿರ್ವಹಣೆ ಅಧಿಕಾರಿ ರವಿ ದೇವಾಡಿಗ ತಲ್ಲೂರು, ಶಿವಾಜಿ ದೇವಾಡಿಗ ಚಿತ್ರಾಪುರ, ಸಂಘದ ಕಟ್ಟಡ ಸಮಿತಿ ಗೌರವಾಧ್ಯಕ್ಷರಾದ ರವಿ ಎಸ್. ದೇವಾಡಿಗ ಮುಂಬೈ, ಧರ್ಮಪಾಲ ದೇವಾಡಿಗ, ಕೋಶಾಧಿಕಾರಿ ಜನಾರ್ದನ ಪಡುಪಣಂಬೂರು, ಗೌರವ ಪ್ರಧಾನ ಕಾರ್ಯದರ್ಶಿ ಯಾದವ ದೇವಾಡಿಗ, ಮಹಿಳಾ ವೇದಿಕೆ ಅಧ್ಯಕ್ಷೆ ವಿಮಲ ಕೃಷ್ಣ ದೇವಾಡಿಗ ಉಪಸ್ಥಿತರಿದ್ದರು.
2020 -21ನೇ ಸಾಲಿನ ದ.ಕ. ಹಾಗೂ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪದ್ಮನಾಭ ದೇವಾಡಿಗ ಸುರತ್ಕಲ್, ಪ್ರಕಾಶ್ ದೇವಾಡಿಗ ಅವರನ್ನು ಅಭಿನಂದಿಸಲಾಯಿತು. ಸಾಧಕರ ನೆಲೆಯಲ್ಲಿ ಕೃಷಿಕ ಕೃಷ್ಣ ದೇವಾಡಿಗ ಪಡುಮನೆ, ಸಮಾಜಸೇವೆಗಾಗಿ ಎನ್.ಎಸ್. ಉಮೇಶ್ ಇಡ್ಯ ಅವರನ್ನು ಗೌರವಿಸಲಾಯಿತು. ನೂತನ ಪಂಚಾಯಿತಿ ಸದಸ್ಯರಾದ ಸುರೇಶ್ ದೇವಾಡಿಗ ಪಂಜ, ವಿನೋದ್ ಕುಮಾರ್ ಕೊಳುವೈಲು, ಅಶ್ವಿನ್ ದೇವಾಡಿಗ ಪಾವಂಜೆ,ಜಯಂತಿ ಅರಂದ ಅವರನ್ನು ಗೌರವಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಬೆಳಿಗ್ಗೆ ಪಾವಂಜೆ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಸಂಘದ ವತಿಯಿಂದ ಸಾಮೂಹಿಕ ಶನಿ ದೇವರ ಪೂಜೆ ಮತ್ತು ಸತ್ಯನಾರಾಯಣ ಪೂಜೆ ನಡೆಯಿತು. ಸಭಾ ಕಾರ್ಯಕ್ರಮಕ್ಕೆ ಮೊದಲು ಬೆಳ್ಮಣ್ ದೇವಾಡಿಗ ಸಮಾಜದ ಸ್ಥಾಪಕ ಅಧ್ಯಕ್ಷ ವಸಂತ ದೇವಾಡಿಗ ನಿಟ್ಟೆ ಅವರ ನಿಧನಕ್ಕೆ ಸಂತಾಪ ಸೂಚಿಸಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಜನಾರ್ದನ ಪಡುಪಣಂಬೂರು ಸ್ವಾಗತಿಸಿದರು. ಜಗದೀಶ ಪಲಿಮಾರು ವಂದಿಸಿದರು. ಯಾದವ ದೇವಾಡಿಗ ಪಾವಂಜೆ ನಿರೂಪಿಸಿದರು.
Kshetra Samachara
17/01/2021 06:59 pm