ಮುಲ್ಕಿ: "ನಮ್ಮ ಸಂಸಾರ- ಆನಂದ ಸಾಗರ" ಫ್ಯಾಮಿಲಿ ಪೋಟೊ ಆನ್ ಲೈನ್ ಸ್ಪರ್ಧೆ; ಬಹುಮಾನ ವಿತರಣೆ
ಮುಲ್ಕಿ: ಮುಲ್ಕಿ ರೋಟರಿ ಕ್ಲಬ್ ಸಂಯೋಜನೆಯ "ನಮ್ಮ ಸಂಸಾರ- ಆನಂದ ಸಾಗರ" ಫ್ಯಾಮಿಲಿ ಪೋಟೊ ಆನ್ಲೈನ್ ಸ್ಪರ್ಧೆಯ ಬಹುಮಾನ ವಿತರಣೆ ಮುಲ್ಕಿಯ ಕಾರ್ನಾಡ್ ರೋಟರಿ ಶತಾಬ್ದಿ ಭವನದಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಮುಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೋಟರಿ ಜಿಲ್ಲಾ ಗವರ್ನರ್ ಮೇಜರ್ ಡೋನರ್ ರಂಗನಾಥ ಭಟ್ ಮಾತನಾಡಿ, ಕೊರೊನ ದಿನಗಳಲ್ಲಿ ತುಳುನಾಡಿನ ಪರಿಕಲ್ಪನೆಗಳ ಮೂಲಕ ಅನೇಕ ಸ್ಪರ್ಧೆಗಳನ್ನು ಆನ್ಲೈನ್ ಮುಖಾಂತರ ಸಂಘಟಿಸಿ, ಉತ್ತಮ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿದ ಮುಲ್ಕಿ ರೋಟರಿ ಕ್ಲಬ್ ಕಾರ್ಯವೈಖರಿ ಶ್ಲಾಘನೀಯ ಎಂದರು.
ರೋಟರಿ ಸಹಾಯಕ ರಾಜ್ಯಪಾಲ ಬಾಲಕೃಷ್ಣ ಶೆಟ್ಟಿ ಕಳ್ಳಿಗೆ, ರೋಟರಿ ವಲಯ ಸೇನಾನಿ ಎಂ.ನಾರಾಯಣ,ಮುಲ್ಕಿ ರೋಟರಿ ಕ್ಲಬ್ ಕಾರ್ಯದರ್ಶಿ ವೈ.ಎನ್. ಸಾಲ್ಯಾನ್, ನಿಯೋಜಿತ ಅಧ್ಯಕ್ಷ ಗೋಪಾಲ ಭಂಡಾರಿ, ಮುಲ್ಕಿ ರೋಟರಿಯ ಪದಾಧಿಕಾರಿಗಳಾದ ರವಿಚಂದ್ರ, ನರೇಂದ್ರ ಕೆರೆಕಾಡು, ಮಲ್ಲಿಕಾರ್ಜುನ ಆರ್.ಕೆ., ಭಾಸ್ಕರ ಶೆಟ್ಟಿಗಾರ್, ಭುಜಂಗ ಕವತ್ತಾರು ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸ್ವಾಮಿ ಕೊರಗಜ್ಜ ಹಾಡಿನ ಮೂಲಕ ಖ್ಯಾತಿ ಪಡೆದಿರುವ ಮಾ. ಕಾರ್ತಿಕ್ ಕಾರ್ಕಳ ಅವರಿಗೆ ರಂಗನಾಥ ಭಟ್ ಪ್ರತಿಭಾ ನಿಧಿ ಅರ್ಪಿಸಿದರು.
ಆದರ್ಶ ದಂಪತಿಯಾಗಿ ಹೆಜಮಾಡಿಯ ಮಂಜುನಾಥ ಗಡಿಯಾರ- ಕವಿತಾ ಗಡಿಯಾರ್ ಅವರನ್ನು ಗೌರವಿಸಲಾಯಿತು. ಬಳಿಕ "ನಮ್ಮ ಸಂಸಾರ- ಆನಂದ ಸಾಗರ" ಸ್ಪರ್ಧೆಯಲ್ಲಿ ಭಾಗವಹಿಸಿದ ದಂಪತಿಗಳಲ್ಲಿ ವಿಜಯಶಾಲಿಯಾದವರಿಗೆ ಬಹುಮಾನ ವಿತರಿಸಲಾಯಿತು. * ಬಹುಮಾನ ಗಳಿಸಿದವರು: ಲೋಹಿತ್ ಕುಮಾರ್ ಉಡುಪಿ (ಪ್ರಥಮ), ಕಾಂತುಬೆಟ್ಟು ಕುಟುಂಬ ಅಜೆಕಾರು ಕಾರ್ಕಳ (ದ್ವಿತೀಯ) ದಿನೇಶ್ ವಿದ್ಯಾ (ತೃತಿಯ).
Kshetra Samachara
10/01/2021 06:08 pm