ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನಾಳೆಯಿಂದ 41ನೇ ರಾಜ್ಯ ಮಟ್ಟದ ನಾಟಕ ಸ್ಪರ್ಧೆ

ಉಡುಪಿ: ರಾಜ್ಯದ ಪ್ರತಿಷ್ಠಿತ ನಾಟಕ ಸಂಸ್ಥೆಯಲ್ಲಿ ಒಂದಾದ 'ರಂಗಭೂಮಿ' 41ನೇ ರಾಜ್ಯ ಮಟ್ಟದ ಸ್ಪರ್ಧೆಯನ್ನು ಉಡುಪಿಯಲ್ಲಿ ಆಯೋಜಿಸಿದೆ. ಭಾನುವಾರ ಕಾಲೇಜಿನ ಮುದ್ದಣ ಬಯಲು ರಂಗಮಂದಿರದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ದೇವಿದಾಸ ನಾಯ್ಕ್ ಅವರು ನಾಟಕ ಸ್ಪರ್ಧೆ ಉದ್ಘಾಟಿಸಲಿದ್ದಾರೆ.

ಈ ಸ್ಪರ್ಧೆಯಲ್ಲಿ ಬೆಂಗಳೂರಿನ 2, ಮೈಸೂರು,ಉಡುಪಿ, ಧಾರವಾಡ, ಕೋಲಾರ ಹಾಗೂ ಕೊಪ್ಪಳದ ತಲಾ ಒಂದೊಂದು ತಂಡ ಭಾಗವಹಿಸಲಿವೆ. ನಾಟಕ ಸ್ಪರ್ಧೆ ಜ.16ರ ತನಕ ಪ್ರದರ್ಶನಗೊಳ್ಳುತ್ತದೆ. ಪ್ರಥಮ ಬಹುಮಾನ ಪಡೆದ ತಂಡಕ್ಕೆ 35,000, ದ್ವಿತೀಯ ತಂಡಕ್ಕೆ 25,000, ತೃತೀಯ ತಂಡಕ್ಕೆ 15,000 ನಗದು ಜೊತೆಗೆ ಪ್ರಶಸ್ತಿ ಸಿಗಲಿದೆ.

ಜೊತೆಗೆ ಶ್ರೇಷ್ಠ ನಿರ್ದೇಶನ, ನಟ-ನಟಿ ಪ್ರಸಾದನ ,ರಂಗಪರಿಕರ, ಸಂಗೀತ, ಬೆಳಕು, ಹಾಸ್ಯನಟ, ಬಾಲನಟ ಎಲ್ಲ ವಿಭಾಗಗಳಿಗೆ ನಗದು ಸಹಿತ ಪ್ರಶಸ್ತಿಗಳನ್ನು ನೀಡಲಾಗುತ್ತದೆ ಎಂದು 'ರಂಗಭೂಮಿ' ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Edited By : Manjunath H D
Kshetra Samachara

Kshetra Samachara

09/01/2021 01:01 pm

Cinque Terre

13.41 K

Cinque Terre

0

ಸಂಬಂಧಿತ ಸುದ್ದಿ