ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಬ್ಯಾರಿ ಲಿಪಿ ಹಾಗೂ ಸಂಖ್ಯೆಯನ್ನು ಒಳಗೊಂಡ 2021ರ ವರ್ಷದ ಕ್ಯಾಲೆಂಡರನ್ನು (ಬ್ಯಾರಿ ನಾಲ್ ಕನಕ್ಕ್) ಇಂದು ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಅವರು, ಪ್ರತಿ ಬ್ಯಾರಿ ಭಾಷಿಗರು ಸುಲಭವಾಗಿ ನೂತನ ಬ್ಯಾರಿ ಲಿಪಿಯನ್ನು ಕಲಿಯಲು ಹಾಗೂ ಅಕ್ಷರ ನೆನಪಿನಲ್ಲಿ ಉಳಿಯಲು ಈ ಕ್ಯಾಲೆಂಡರ್ ಸಹಾಯಕವಾಗಲಿದೆ. ಈ ಐತಿಹಾಸಿಕ ಹೆಜ್ಜೆಗೆ ಬ್ಯಾರಿ ಭಾಷಿಗರು ಹಾಗೂ ಬ್ಯಾರಿಯೇತರ ಭಾಷಿಗರ ಸಹಕಾರ ಅತ್ಯಗತ್ಯ ಎಂದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ, ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಹುಸೇನ್ ಕಾಟಿಪಳ್ಳ,
ಸಾಮಾಜಿಕ ಕಾರ್ಯಕರ್ತ ಬಶೀರ್ ತಂಡೇಲ್, ಲೇಖಕ ಅಬ್ದುಲ್ ರಹ್ಮಾನ್ ಕುತ್ತೆತ್ತೂರು, ಬ್ಯಾರಿ ಅಧ್ಯಯನ ಪೀಠದ ಮುಖ್ಯಸ್ಥ
ಡಾ.ಅಬೂಬಕರ್ ಸಿದ್ದೀಕಿ, ಪ್ರಾಧ್ಯಾಪಕ ಹೈದರ್ ಆಲಿ, ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯರಾದ ಶಂಶೀರ್ ಬುಡೋಳಿ, ರೂಪಾಶ್ರೀ ವರ್ಕಾಡಿ ಉಪಸ್ಥಿತರಿದ್ದರು.
Kshetra Samachara
01/01/2021 10:22 pm