ಮುಲ್ಕಿ: ಕೆನರಾ ಅಭಿವೃದ್ಧಿ ಮತ್ತು ಶಾಂತಿ ಸಂಸ್ಥೆ ಮಂಗಳೂರು,ಮುಲ್ಕಿ ಸಿಒಡಿಪಿ ಪ್ರವರ್ತಿತ ಕ್ರಿಸ್ತಜ್ಯೋತಿ ಸ್ವಸಹಾಯ ಸಂಘ ವತಿಯಿಂದ ಕ್ರಿಸ್ಮಸ್ ಆಚರಣೆ ಕಾರ್ನಾಡು ಮೈಮುನ ಫೌಂಡೇಶನ್ ಆಶ್ರಮದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ವಹಿಸಿ ಮುಲ್ಕಿ ಚರ್ಚ್ ಧರ್ಮಗುರು ಫಾ. ಸಿಲ್ವೆಸ್ಟರ್ ಡಿಕೋಸ್ತ ಮಾತನಾಡಿ, ಕ್ರಿಸ್ಮಸ್ ಆಚರಣೆ ಸರ್ವಧರ್ಮದ
ಪ್ರತೀಕವಾಗಿದ್ದು, ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವ ಮೂಲಕ ಶಾಂತಿ- ಸೌಹಾರ್ದತೆ, ಸಹಬಾಳ್ವೆ ಮೂಲಕ ಬದುಕೋಣ ಎಂದರು.
ಕಾರ್ನಾಡು ಡಿವೈನ್ ಕಾಲ್ ಸೆಂಟರ್ ಡೈರೆಕ್ಟರ್ ಫಾ. ಅಬ್ರಹಾಂ ಮಾತನಾಡಿ, ಬಡವರ ಕಣ್ಣೀರೊರೆಸುವ ಆಸಿಫ್ ನೇತೃತ್ವದ ಕಾರ್ನಾಡ್ ಮೈಮುನಾ ಫೌಂಡೇಶನ್ ನ ಕಾರ್ಯವೈಖರಿ ಶ್ಲಾಘನೀಯ ಎಂದರು.
ವೇದಿಕೆಯಲ್ಲಿ ಕಾರ್ನಾಡ್ ಮೈಮುನಾ ಫೌಂಡೇಶನ್ ನಿರ್ದೇಶಕ ಆಸಿಫ್, ಸಿಒಡಿಪಿ ಸಂಸ್ಥೆಯ ಪುಷ್ಪವೇಣಿ, ಕ್ರಿಸ್ತಜ್ಯೋತಿ ಸ್ವಸಹಾಯ ಸಂಘದ ಸದಸ್ಯರಾದ ವಲೇರಿಯನ್ ರೆಬೆಲ್ಲೋ, ರಾಖಿ ಸಲ್ದಾನ ಉಪಸ್ಥಿತರಿದ್ದರು.
ಈ ಸಂದರ್ಭ ಆಶ್ರಮಕ್ಕೆ ಪಡಿತರ ಸಾಮಗ್ರಿ ವಿತರಿಸಲಾಯಿತು ಹಾಗೂ ಕ್ರಿಸ್ಮಸ್ ಹಬ್ಬ ಆಚರಿಸಿ, ಸಿಹಿತಿಂಡಿ ವಿತರಿಸಲಾಯಿತು. ಸಾಮಾಜಿಕ ಕಾರ್ಯಕರ್ತೆ ಜೀನತ್ ಸ್ವಾಗತಿಸಿದರು. ಫ್ರಾನ್ಸಿಸ್ ನಿರೂಪಿಸಿದರು.
Kshetra Samachara
28/12/2020 09:57 am