ಮುಲ್ಕಿ: ಇತಿಹಾಸ ಪ್ರಸಿದ್ಧ ಎಕ್ಕಾರು ಶ್ರೀ ಕೊಡಮಣಿಂತ್ತಾಯ ಜಾತ್ರಾ ಮಹೋತ್ಸವಕ್ಕೆ ಭಾನುವಾರ ಚಾಲನೆ ನೀಡಲಾಯಿತು.
ಶನಿವಾರ ರಾತ್ರಿ ವರ್ಷಾವಧಿ ಜಾತ್ರೆಯ ಪೂರ್ವ ಸಂಪ್ರದಾಯದಂತೆ ಕಾವರ ಮನೆಯಿಂದ ಭಂಡಾರ ಹೊರಟು ದೇರಿಂಜ ಗಿರಿಗೆ ಬಂದು ರಾತ್ರಿ ಧ್ವಜಾರೋಹಣ ನಡೆಯಿತು.
ಇಂದು ಬೆಳಗ್ಗೆ ಉಳ್ಳಾಯ ದೈವದ ನೇಮೋತ್ಸವ ನಡೆಯಿತು. ಮಧ್ಯಾಹ್ನ ಅನ್ನ ಸಂತರ್ಪಣೆ, ರಾತ್ರಿ ಶ್ರೀ ಕೊಡಮಣಿಂತ್ತಾಯ ದೈವದ ನೇಮೋತ್ಸವ ನಡೆಯಿತು.
ಈ ಸಂದರ್ಭ ಕ್ಷೇತ್ರದ ಆಡಳಿತ ಮೊಕ್ತೇಸರರಾದ ನಿತಿನ್ ಹೆಗ್ಡೆ ಕಾವರ ಮನೆ ಮಾತನಾಡಿ ಕೊರೊನಾದಿಂದ ಈ ಬಾರಿ ಉತ್ಸವ ಸರಳ ರೀತಿಯಲ್ಲಿ ನಡೆದಿದ್ದು, ಭಕ್ತಾದಿಗಳು ಕೊರೊನಾ ನಿಯಮ ಪಾಲಿಸಲು ವಿನಂತಿಸಿದರು.
ಡಿ.28ರಂದು ರಾತ್ರಿ ಶ್ರೀ ಕಾಂತೇರಿ ಜುಮಾದಿ ದೈವದ ನೇಮೋತ್ಸವ, ಡಿ. 29: ಶ್ರೀ ಜಾರಂದಾಯ ದೈವದ ನೇಮೋತ್ಸವ, ಡಿ. 30: ಶ್ರೀ ಸರಳ ಜುಮಾದಿ ದೈವದ ನೇಮೋತ್ಸವ,
ಡಿ. 31: ಪಿಲಿಚಾಮುಂಡಿ ದೈವದ ನೇಮೋತ್ಸವ, ಜ.1: ಬೆಳಿಗ್ಗೆ10 ಗಂಟೆಗೆ ಧ್ವಜ ಅವರೋಹಣ ನಡೆಯಲಿದೆ ಎಂದರು.
ಕ್ಷೇತ್ರಕ್ಕೆ ಶಾಸಕ ಉಮಾನಾಥ ಕೋಟ್ಯಾನ್ , ಮಾಜಿ ಸಚಿವ ಅಭಯಚಂದ್ರ ಜೈನ್, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಚಂದ್ರಹಾಸ ಸನಿಲ್ ಮೂಡಬಿದ್ರೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.
Kshetra Samachara
27/12/2020 04:40 pm