ಕಾಪು: ಇಲ್ಲಿನ ಪೊಲಿಪು ಜಾಮಿಯಾ ಮಸೀದಿಯ ಅಧಿಕೃತ ಮೊಬೈಲ್ ಅಪ್ಲಿಕೇಶನ್ "ಪಿಜೆಎಂ" ಆ್ಯಪ್ ಬಿಡುಗಡೆಗೊಳಿಸುವ ಮೂಲಕ ಜಮಾತ್ ಬಾಂಧವರಿಗೆ ಜಮಾತಿನ ಸಂಪೂರ್ಣ ಮಾಹಿತಿ ಸುಲಭವಾಗಿ ತಿಳಿದುಕೊಳ್ಳುವ ಅವಕಾಶ ಕಲ್ಪಿಸಲಾಗಿದೆ.
ಪಿ.ಬಿ.ಅಹಮ್ಮದ್ ಮುಸ್ಲಿಯಾರ್ ( ಕಾಪು ಉಸ್ತಾದ್) ಹಾಗೂ ಪೊಲಿಪು ಜುಮಾ ಮಸೀದಿ ಖತೀಬರಾದ ಇರ್ಷಾದ್ ಸಹದಿ ಅವರು ಆ್ಯಪ್ ಬಿಡುಗಡೆಗೊಳಿಸಿದರು.
ಜಮಾಅತಿಗೆ ಒಳಪಟ್ಟ 255 ಮನೆಗಳಿದ್ದು, ಜಮಾಅತಿನ ಪ್ರತಿಯೊಂದು ಯೋಜನೆ,ಸಮಿತಿ ಹಾಗೂ ಸಿಬ್ಬಂದಿ ವಿವರ ಮತ್ತು ಸಂಪರ್ಕ ಸಂಖ್ಯೆ, ಸಮಯ,
ಹಿಜರಿ ದಿನ ಹಾಗೂ ಮಸೀದಿ ಕೇಂದ್ರೀಕರಿಸಿ ಐದು ವಕ್ತ್ ನಮಾಝಿನ ಸಮಯ ಸೇರಿದಂತೆ ಜಮಾತಿನ ಎಲ್ಲ ವಿವರ ಪಿಜೆಎಂ ಆ್ಯಪ್ ಮೂಲಕ ತಿಳಿದುಕೊಳ್ಳಬಹುದಾಗಿದೆ ಎಂದು ಉಪಾಧ್ಯಕ್ಷ ಅಮೀರ್ ಹಂಝ ವಿವರಿಸಿದ್ದಾರೆ.
ಮುಂದಿನ ದಿನದಲ್ಲಿ ಈ ಆ್ಯಪ್‍ನ್ನು ಮತ್ತಷ್ಟು ವಿನ್ಯಾಸಗೊಳಿಸಿ ಹೆಚ್ಚಿನ ಸೌಲಭ್ಯ ಒದಗಿಸಲಾಗುವುದು ಎಂದು ಅಪ್ಲಿಕೇಶನ್ ವಿನ್ಯಾಸಗಾರ ಫಾರೂಕ್ ಉಚ್ಚಿಲ ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಮಾಸ್ಟರ್, ಕೋಶಾಧಿಕಾರಿ ಶೇಖ್ ನಝೀರ್ ಕಾಪು,ಸದಸ್ಯರಾದ ಅಬ್ದುಲ್ಲ ಹಾಗೂ ಕಂಪ್ಯೂಟರ್ ಇನ್ ಚಾರ್ಜ್ ಇಮ್ತಿಯಾಝ್ ಅಹಮದ್ ಕಾಪು ಉಪಸ್ಥಿತರಿದ್ದರು.
Kshetra Samachara
26/12/2020 10:32 am