ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ವಿದ್ಯುತ್ ಚಾಲಿತ ಸಂಚಾರಿ ಶೀತಲೀಕೃತ ಶವ ರಕ್ಷಣಾ ಯಂತ್ರ ಲೋಕಾರ್ಪಣೆ

ಉಡುಪಿ: ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ನ ಎರಡನೇ ಹಂತದ ಯೋಜನೆ 'ವಿದ್ಯುತ್ ಚಾಲಿತ ಸಂಚಾರಿ ಶೀತಲೀಕೃತ ಶವ ರಕ್ಷಣಾ ಯಂತ್ರದ ಲೋಕಾರ್ಪಣೆ ಹಾಗೂ ಯಂತ್ರ ಭದ್ರತಾ ಕುಟೀರದ ಉದ್ಘಾಟನೆ ಬಡಗುಬೆಟ್ಟು- ಶಾಂತಿನಗರದ 'ನಿಮ್ಮ ಮನೆ' ಆಶ್ರಯದಲ್ಲಿ ನಡೆಯಿತು.

ಶವ ರಕ್ಷಣಾ ಯಂತ್ರದ ಭದ್ರತಾ ಕುಟೀರವನ್ನು ಪಿಡಿಒ ಅಶೋಕ ನಾಯಕ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ನಾಗರಿಕ ಸಮಿತಿಯ ಯೋಜನೆ ಮಣಿಪಾಲ, ಹಿರಿಯಡ್ಕ ಭಾಗದ ಜನತೆಗೆ ಅನುಕೂಲವಾಗಲಿದೆ ಎಂದರು. ಶವ ರಕ್ಷಣಾ ಯಂತ್ರವನ್ನು ಉದ್ಯಮಿ ಸುಧಾಕರ್ ಪೂಜಾರಿ ಲೋಕಾರ್ಪಣೆ ಮಾಡಿದರು.

ಕಳೆದ ಮೂರು ವರ್ಷಗಳಿಂದ ನಾಗರಿಕ ಸಮಿತಿಯಿಂದ ಎರಡು ಶವ ರಕ್ಷಣಾ ಯಂತ್ರಗಳು ಉಡುಪಿ, ಬ್ರಹ್ಮಾವರ, ಕಾಪು ತಾಲೂಕುಗಳಲ್ಲಿ ಉಚಿತವಾಗಿ ಒದಗಿಸಲಾಗುತ್ತಿದೆ. ಬೇಡಿಕೆ ಹೆಚ್ಚಾದ ಕಾರಣ ಮಣಿಪಾಲ ಕೇಂದ್ರವಾಗಿಟ್ಟು ಹೊಸ ಯಂತ್ರ ಇಡಲಾಗಿದೆ. ಈ ಯಂತ್ರವನ್ನು ಮಣಿಪಾಲ, ಹಿರಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅವಶ್ಯಕತೆ ಇರುವವರು ಉಚಿತವಾಗಿ ಬಳಸಬಹುದಾಗಿದೆ. ಸಾಗಾಟದ ವೆಚ್ಚವನ್ನಷ್ಟೆ ಬಳಕೆದಾರರು ಭರಿಸಬೇಕಾಗುತ್ತದೆ. ಬಳಕೆಯಾದ ಬಳಿಕ ಯಂತ್ರವನ್ನು ಯಥಾರೂಪದಲ್ಲಿ ಸಮಿತಿಯ ಯಂತ್ರ ಭದ್ರತಾ ಕುಟೀರಕ್ಕೆ ಹಿಂತಿರುಗಿಸಬೇಕೆಂದು ನಾಗರಿಕ ಸಮಿತಿ ಪ್ರಧಾನ ಸಂಚಾಲಕ ನಿತ್ಯಾನಂದ ಒಳಕಾಡು ಪ್ರಾಸ್ತಾವಿಕ ಮಾತನಾಡಿ, ಯೋಜನೆ ವಿವರ ನೀಡಿದರು.

Edited By :
Kshetra Samachara

Kshetra Samachara

05/10/2020 06:50 pm

Cinque Terre

11.32 K

Cinque Terre

0

ಸಂಬಂಧಿತ ಸುದ್ದಿ