ಕಾಪು : ತುಳುನಾಡಿನಲ್ಲಿ ನಡೆಯುವ ಆಚರಣೆ ವಿಭಿನ್ನವಾಗಿದ್ದು ಎಲ್ಲವೂ ನಂಬಿಕೆಯ ಆಧಾರದಲ್ಲಿ ನಿಂತಿವೆ. ತುಳುನಾಡು ಹತ್ತು ಹಲವು ಆಚರಣೆಗಳಿಗೆ ಪ್ರಸಿದ್ಧಿಯಾಗಿದೆ. ಇಲ್ಲಿನ ಧಾರ್ಮಿಕ ಕ್ಷೇತ್ರಗಳಲ್ಲಿ ನಡೆಯುವ ಆರಾಧನಾ ವಿಧಾನಗಳು ಕೂಡಾ ವೈವಿಧ್ಯತೆಯಿಂದ ಕೂಡಿರುತ್ತವೆ.
ಇದರಲ್ಲಿ ಎಲ್ಲೂರು ಸೀಮೆಯ ಶ್ರೀ ಬ್ರಹ್ಮ ಬೈದರ್ಕಳ ಗರಡಿಗಳಲ್ಲಿ ನಡೆಯುವ ಆಟಿ ಆಗೆಲ್ ಸೇವೆಯೂ ಒಂದಾಗಿದೆ.
ತುಳುನಾಡಿನಲ್ಲಿ 250 ಕ್ಕೂ ಅಧಿಕ ಶ್ರೀ ಬ್ರಹ್ಮ ಬೈದರ್ಕಳ ಕೋಟಿ ಚೆನ್ನಯ ಗರಡಿಗಳಿದ್ದು 66 ಮೂಲ ಗರಡಿಗಳಿವೆ. ಇವುಗಳ ಪೈಕಿ ಎಲ್ಲೂರು ಸೀಮೆಯ ಆರು ಗರೋಡಿಗಳಲ್ಲಿ ಮಾತ್ರಾ ಆಟಿದ ಅಗೆಲ್ ಸೇವೆ ನಡೆಯುತ್ತದೆ.
ತುಳುನಾಡಿನಲ್ಲಿ ಆಟಿ ತಿಂಗಳುಗಳಲ್ಲಿ ದೈವ ದೇವರುಗಳ ಪೂಜೆ ಪುರಸ್ಕಾರಗಳು ನಡೆಯುವುದಿಲ್ಲ. ಆದರೆ ಎಲ್ಲೂರು ಸೀಮೆಯಲ್ಲಿ ಈ ಸೇವೆ ನಡೆಯುತ್ತದೆ. ಎಲ್ಲೂರು ಸೀಮೆಯ ಕೇಂಜ, ಎಲ್ಲೂರು, ಕಳತ್ತೂರು, ಪಣಿಯೂರು ಆದಿ, ಪಣಿಯೂರು ಹೊಸ, ಅಡ್ವೆ, ಕೊಳಚೂರು ಗರಡಿಗಳಲ್ಲಿ ಮಾತ್ರ ಈ ಸೇವೆ ನಡೆಯುತ್ತದೆ.
ಕೋಟಿ ಚೆನ್ನಯರು ಜೀವಿತಾವಧಿಯ ಕಾಲಾನಂತರ ತುಳುನಾಡಿನಲ್ಲಿ ಅವಳಿ ವೀರರನ್ನು ದೈವಿಕ ಪುರುಷರೆಂದು ಪರಿಗಣಿಸಲ್ಪಟ್ಟಿದ್ದು ಕಾರ್ನಿಕ ಪುರುಷರಾಗಿ ಮೆರೆದಿದ್ದಾರೆ. ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಕೋಟಿ ಚೆನ್ನಯರ ಆರಾಧನೆ ನಡೆಯುತ್ತದೆ.
ಎಲ್ಲೂರು ಸೀಮೆಯ ಕೇಂಜ ಗರೋಡಿ ಆಟಿ ತಿಂಗಳಲ್ಲಿ ನಡೆಯುವ ಈ ಸೇವೆಯಲ್ಲಿ ಊರಿನ ಭಕ್ತಾದಿಗಳು ಪಾಲ್ಗೊಳ್ಳುತ್ತಾರೆ ಕೋಟಿ ಚೆನ್ನೆರ ದರ್ಶನ ಸೇವೆ ಜೊತೆಗೆ ಹಲವಾರು ತರಕಾರಿ ಅನ್ನದಿಂದ ನೈವೇದ್ಯವನ್ನು ತಯಾರಿ ಮಾಡಿ ಬಡಿಸುವ ಕ್ರಮ ಇಲ್ಲಿ ನಡೆಯುತ್ತದೆ.
Kshetra Samachara
16/08/2022 04:18 pm