ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಈ ಬಾರಿ ಎರಡು ಪ್ರತ್ಯೇಕ ದಿನಗಳಲ್ಲಿ ಅಷ್ಠಮಿ ಆಚರಣೆ: ಶ್ರೀಕೃಷ್ಣ ಲೀಲೋತ್ಸವಕ್ಕೆ ದಿನಗಣನೆ!

ಉಡುಪಿ: ಉಡುಪಿಯ ಕೃಷ್ಣಮಠದಲ್ಲಿ ನಡೆಯುವ ಅಷ್ಠಮಿ ಹಾಗೂ ಮರುದಿವಸ ನಡೆಯುವ ವಿಟ್ಲಪಿಂಡಿ ಉತ್ಸವ ಭಾರೀ ಪ್ರಸಿದ್ಧಿ ಪಡೆದ ಆಚರಣೆ. ಲಕ್ಷಾಂತರ ಜನ ಸೇರುವ ನಾಡಹಬ್ಬ. ಆದರೆ ಈ ಬಾರಿ, ಕೃಷ್ಣಾಷ್ಠಮಿ ಆಚರಣೆ ಬಗ್ಗೆ ಗೊಂದಲ ಉಂಟಾಗಿದ್ದು, ಅಷ್ಟಮಠಗಳಲ್ಲಿಯೇ ದಿನಾಂಕದ ವಿಷಯದಲ್ಲಿ ಏಕ ನಿರ್ಧಾರ ಸಾಧ್ಯವಾಗಿಲ್ಲ. ಇದರಿಂದ ಈ ಬಾರಿ ಎರಡು ಪ್ರತ್ಯೇಕ ದಿನಗಳಲ್ಲಿ ಅಷ್ಠಮಿ ಆಚರಣೆ ನಡೆಯಲಿದೆ. ಹಲವು ಗೊಂದಲಗಳ ನಡುವೆ ಈ ಬಾರಿ ಅಷ್ಟಮಿ ಆಚರಣೆ ಒಟ್ಟು ಮೂರು ದಿನ ನಡೆಯಲಿದೆ.

ಈ ಹಿಂದೆಯೂ ಹಲವು ಬಾರಿ ಎರಡು ಅಷ್ಠಮಿ ಆಚರಣೆಗಳಿಂದ ಗೊಂದಲ ಉಂಟಾಗಿತ್ತು. ಈ ಬಾರಿಯೂ ಅದೇ ಸಮಸ್ಯೆ ತಲೆದೋರಿದೆ.

ಪರ್ಯಾಯ ಶ್ರೀಕೃಷ್ಣಾಪುರ ಮಠ, ಸೋದೆ, ಕಾಣಿಯೂರು, ಶೀರೂರು, ಭೀಮನಕಟ್ಟೆ ಮಠವು ತಿಥಿ ನಿರ್ಣಯ ಶ್ರೀಕೃಷ್ಣ ಪಂಚಾಂಗವನ್ನು (ಆರ್ಯಭಟೀಯ) ಅನುಸರಿಸುತ್ತಿದ್ದು, ಈ ಬಾರಿ ಆ. 19, ರಾತ್ರಿ 11.54ಕ್ಕೆ ಶ್ರೀಕೃಷ್ಣನಿಗೆ ಅರ್ಘ್ಯ ಪ್ರದಾನ, ಆ. 20ರಂದು ವಿಟ್ಲ ಪಿಂಡಿ (ಶ್ರೀಕೃಷ್ಣ ಲೀಲೋತ್ಸವ) ಸಂಭ್ರಮದಿಂದ ನಡೆಯಲಿದೆ.

ಆದರೆ ಪೇಜಾವರ, ಪಲಿಮಾರು, ಅದಮಾರು ಹಾಗೂ ಪುತ್ತಿಗೆ ಮಠವು ದೃಗ್ಗಣಿತ ಪಂಚಾಂಗವನ್ನು ಅನುಸರಿಸುತ್ತಿದ್ದು ಆ. 18,ರಾತ್ರಿ 11.39ಕ್ಕೆ ಶ್ರೀಕೃಷ್ಣನಿಗೆ ಅರ್ಘ್ಯ ಪ್ರದಾನವಾದರೆ, ಆ. 19, 20ಕ್ಕೆ ವಿಟ್ಲ ಪಿಂಡಿ( ಶ್ರೀಕೃಷ್ಣ ಲೀಲೋತ್ಸವ) ಆಚರಿಸಲಾಗುತ್ತಿದೆ. ಈ ನಡುವೆ ಪುತ್ತಿಗೆ ಮಠದಲ್ಲಿ ಏಕಾಚರಣೆ ನೆಲೆಯಲ್ಲಿ ಆ. 19, 20ಕ್ಕೆ ಅಷ್ಟಮಿ/ವಿಟ್ಲ ಪಿಂಡಿ ಜರುಗಲಿದೆ. ಉಡುಪಿಯ ಅಷ್ಟಮಠಗಳಿಗಾದರೂ ಏಕರೂಪ ಪಂಚಾಂಗ, ಏಕರೂಪದ ಏಕಾದಶಿ ಆಚರಣೆ ಮಾಡಿ ಎಂಬ ಭಕ್ತರ ಬೇಡಿಕೆ ಬಹುಕಾಲದಿಂದ ಇದೆ. ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಕೀರ್ತಿಶೇಷರಾದ ಬಳಿಕ ಈ ಬೇಡಿಕೆ ಮಹತ್ವ ಕಳೆದುಕೊಂಡಿದೆ. ಆದರೆ ಉಡುಪಿಯ ಜನ ಪರ್ಯಾಯ ಮಠದವರು ಆಚರಿಸುವ ದಿನದಂದೇ ಅಷ್ಠಮಿಯನ್ನು ಆಚರಿಸಲು ರೂಢಿ ಮಾಡಿಕೊಂಡಿದ್ದಾರೆ.

Edited By : Somashekar
Kshetra Samachara

Kshetra Samachara

13/08/2022 05:17 pm

Cinque Terre

3.86 K

Cinque Terre

0

ಸಂಬಂಧಿತ ಸುದ್ದಿ