ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಪುತ್ತಿಗೆ ಸೋಮನಾಥೇಶ್ವರ ದೇವಸ್ಥಾನಷಡಾಧಾರ ಪ್ರತಿಷ್ಠೆ, ನಿಧಿಕುಂಭ ಸ್ಥಾಪನೆ

ಮೂಡುಬಿದಿರೆ: ಮಹತೋಭಾರ ಪುತ್ತಿಗೆ ಸೋಮನಾಥೇಶ್ವರ ದೇವಸ್ಥಾನವನ್ನು ಸುಮಾರು 15 ಕೋಟಿ ರೂ ವೆಚ್ಚದಲ್ಲಿ ಪುನರ್‌ನಿರ್ಮಿಸಲಾಗುತ್ತಿದ್ದು ಷಡಾಧಾರ ಪ್ರತಿಷ್ಠೆ ಹಾಗೂ ನಿಧಿ ಕುಂಭ ಸ್ಥಾಪನಾನಿಧಿಯು ಎಡಪದವು ಬ್ರಹ್ಮಶ್ರೀ ವೆಂಕಟೇಶ ತಂತ್ರಿಗಳ ನೇತೃತ್ವದಲ್ಲಿ ಗುರುವಾರ ನಡೆಯಿತು.

ಸೋಮನಾಥ ದೇವರು ಹಾಗೂ ಮಹಿಷಮರ್ದಿನಿ ಅಮ್ಮನವರ ಗರ್ಭಗುಡಿಗೆ ಕಲ್ಲಿನಿಂದ ನಿರ್ಮಿಸಿದ ನಿಧಿಕುಂಭಕ್ಕೆ ನವರತ್ನಗಳು, ಶುದ್ಧ ಚಿನ್ನ, ಬೆಳ್ಳಿಯನ್ನು ಸಮರ್ಪಿಸಲಾಯಿತು.

ಭಕ್ತರು ಶುದ್ಧ ಚಿನ್ನ ಹಾಗೂ ಬೆಳ್ಳಿಯನ್ನು ಕಾಣಿಕೆಯಾಗಿ ನೀಡಿದರು. ಕ್ಷೇತ್ರದ ಅನುವಂಶೀಯ ಆಡಳಿತ ಮೊಕ್ತೇಸರ ಕುಲದೀಪ ಎಂ. ಚೌಟರ ಅರಮನೆ, ಅಮ್ಮನವರ ಗರ್ಭಗುಡಿಯ ದಾನಿಗಳಾದ ಕೆ. ರಾಮ್‌ಪ್ರಸಾದ್ ಚೆನ್ನೆöÊ, ತೀರ್ಥಮಂಟಪದ ದಾನಿಗಳಾದ ಮಡ್ಮಂಣ್ಣಾಯ ಕುಟುಂಬದ ಪರವಾಗಿ ರಾಮದಾಸ ಮಡ್ಮಣ್ಣಾಯ ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ., ಪುರಸಭಾಧ್ಯಕ್ಷ ಪ್ರಸಾದ್‌ಕುಮಾರ್, ಕೆಎಂಎಫ್ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ವೆಂಕಟರಮಣ ಹನುಮಂತ ದೇವಸ್ಥಾನದ ಆಡಳಿತ ಮೊಕ್ತೇಸರ ಉಮೇಶ್ ಜಿ. ಪೈ, ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಜಯಕರ ಆಚಾರ್ಯ ಪುರೋಹಿತ್, ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕೆ.ಶ್ರೀಪತಿ ಭಟ್, ಕರ‍್ಯದರ್ಶಿ ವಿದ್ಯಾ ರಮೇಶ್ ಭಟ್, ಶೀನ ಶೆಟ್ಟಿ, ಪವಿತ್ರಪಾಣಿ ಶಿವಪ್ರಸಾದ್ ಆಚಾರ್ಯ, ಅರಮನೆಯ ಶ್ಯಾನುಭೊಗ ವೆಂಕಟರಮಣ ಬೆರ್ಕೆ, ಕ್ಷೇತ್ರದ ವ್ಯವಸ್ಥಾಪಕ ರವಿಶಂಕರ ಕಾರಂತ ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

07/07/2022 08:06 pm

Cinque Terre

3.3 K

Cinque Terre

0

ಸಂಬಂಧಿತ ಸುದ್ದಿ