ಉಡುಪಿ: ಉಡುಪಿ ಕಲ್ಸಂಕ ಸರ್ಕಲ್ ಬಳಿ ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಪ್ರಯುಕ್ತ ವಿಶಿಷ್ಟ ರೀತಿಯಲ್ಲಿ ದೇವಳದ ಪ್ರಚಾರದ ಕೊಡೆ ಬಿಡುಗಡೆ ಕಾರ್ಯಕ್ರಮ ನಡೆಯಿತು. ಇದರ ಬಿಡುಗಡೆಯನ್ನು ಉಡುಪಿಯ ಖ್ಯಾತ ಸಮಾಜ ಸೇವಕರಾದ ಡಾ ಪಿ ವಿ ಭಂಡಾರಿ, ರವಿ ಕಟಪಾಡಿ, ವಿಶು ಕುಮಾರ್ ಶೆಟ್ಟಿ ಅಂಬಲಪಾಡಿ, ನೀತಾ ಪ್ರಭು ಕಾಪು, ನಿತ್ಯಾನಂದ ಒಳಕಾಡು, ಶ್ರೀಮತಿ ಪೃಥ್ವಿಪೈ , ಈಶ್ವರ್ ಮಲ್ಪೆರವರು ಉದ್ಘಾಟನೆ ನಡೆಸಿದರು.
ಈ ಕೊಡೆಯನ್ನು ಉಡುಪಿ ಜಿಲ್ಲೆಯಾದ್ಯಂತ ಕಟ್ಟಲಾಗಿದ್ದು ಜೂನ್ 10ರ ತನಕ ದೇವಳದ ಬ್ರಹ್ಮ ಕಲಶೋತ್ಸವದ ಪ್ರಚಾರ ನಡೆಸಲಿವೆ. ತದನಂತರ ಸಮಾಜದ ಬಡವರಿಗೆ ಉಚಿತವಾಗಿ ನೀಡಲಾಗುತ್ತದೆ. ಈ ರೀತಿಯ ವಿಶಿಷ್ಟ ಕಲ್ಪನೆಯೊಂದಿಗೆ ನೂರಾರು ಕೊಡೆಗಳನ್ನು ಸಿದ್ಧಗೊಳಿಸಲಾಗಿದ್ದು ಕೃಷ್ಣನಗರಿ ಈಗ ಈ ಕಡಿಯಾಳಿ ಕೊಡೆಗಳಿಂದ ಮಿಂದೇಳುತ್ತಿದೆ.
Kshetra Samachara
27/05/2022 09:44 pm