ಮುಲ್ಕಿ: ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಭಾನುವಾರ ಸಂಜೆ ವೈಭವದ "ಶ್ರೀನಿವಾಸ ಕಲ್ಯಾಣ" ಮಹೋತ್ಸವ ನಡೆಯಿತು. ಮಹೋತ್ಸವದಲ್ಲಿ ವರನ ಕಡೆಯವರಾಗಿ ಕಾಪು ಶ್ರೀ ವೆಂಕಟರಮಣ ದೇವಸ್ಥಾನದ ಹತ್ತು ಸಮಸ್ತರು ಭಾಗವಹಿಸಿದ್ದರು.
ವರನ ಹೆತ್ತವರಾಗಿ ಕಾಪು ಗೋಪಾಲ ಶೆಣೈ ದಂಪತಿ, ವಧುವಿನ ಹೆತ್ತವರಾಗಿ ಡಾ.ಅಣ್ಣಪ್ಪ ಕುಡ್ವ ದಂಪತಿ, ಬಕುಳಾದೇವಿಯಾಗಿ ಗೀತಾ ಎಲ್. ನಾಯಕ್, ಮುಲ್ಕಿ ದೇವಸ್ಥಾನದ ಅರ್ಚಕರಾದ ವೆಂಕಟೇಶ ಭಟ್, ಪ್ರಥ್ವೀಶ್ ಭಟ್, ಪದ್ಮನಾಭ ಭಟ್, ಕಾಪು ದೇವಸ್ಥಾನದಿಂದ ಕಮಲಾಕ್ಷ ಭಟ್, ಶ್ರೀನಿವಾಸ ಭಟ್ ಪೌರೋಹಿತ್ಯ ವಹಿಸಿದ್ದರು.
ʼಶ್ರೀನಿವಾಸ ಕಲ್ಯಾಣʼ ಕಥಾ ಸಾರಾಂಶವನ್ನು ವಿದ್ವಾನ್ ಚೇಂಪಿ ಶ್ರೀಕಾಂತ ಭಟ್ ನಡೆಸಿಕೊಟ್ಟರು. ಭಜನಾ ಗಾಯನವನ್ನು ಮುಲ್ಕಿ ಶ್ರೀ ವೆಂಕಟರಮಣ ಭಜನಾ ಮಂಡಳಿಯ ಜಯರಾಮ ಪ್ರಭು ತಂಡ ನಡೆಸಿಕೊಟ್ಟಿತು. ಸೇವಾರ್ಥಿ ವಾಸುದೇವ ಕುಡ್ವ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
08/05/2022 10:05 pm