ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಳತ್ತೂರು: ವಿಜ್ರಂಭಣೆಯ ಹಗಲು ರಥೋತ್ಸವ

ಮುಲ್ಕಿ: ಕಿನ್ನಿಗೋಳಿ ಸಮೀಪದ ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರಯುಕ್ತ ಹಗಲು ರಥೋತ್ಸವ ವಿಜೃಂಭಣೆಯಿಂದ ನಡೆಯಿತು.

ಏ. 24 ಶ್ರೀಕ್ಷೇತ್ರದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರಯುಕ್ತ ಧ್ವಜಾರೋಹಣ ನಡೆಯಿತು. ಏ.27 ಬುಧವಾರ ಪ್ರಾತಃಕಾಲ ವಿಶೇಷ ಪ್ರಾರ್ಥನೆ, ನವಕ ಪ್ರಧಾನ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಶ್ರೀದೇವರ ಹಗಲು ರಥಾರೋಹಣ ನಡೆಯಿತು.

ಸಾವಿರಾರು ಭಕ್ತರು ರಥ ಎಳೆದು ಪುನೀತರಾದರು. ಬಳಿಕ ಪಲ್ಲಪೂಜೆ,ಮಹಾ ಅನ್ನ ಸಂತರ್ಪಣೆ, ರಾತ್ರಿ ಉತ್ಸವ ಬಲಿ, ಶ್ರೀ ದೇವರ ಪಡು ಸವಾರಿ, ಶ್ರೀ ಭೂತಬಲಿ, ಕವಾಟ ಬಂಧನ, ಶಯನೋತ್ಸವ ನಡೆಯಿತು.

ಈ ಸಂದರ್ಭ ದೇವಸ್ಥಾನದ ತಂತ್ರಿಯವರು ಅರ್ಚಕ ಹಾಗೂ ಸಿಬ್ಬಂದಿ ವರ್ಗ, ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ದೆ ಮತ್ತಿತರರು ಉಪಸ್ಥಿತರಿದ್ದರು.

ಏ. 28 ಗುರುವಾರ ಮಹಾರಥೋತ್ಸವ ಸುಡುಮದ್ದು ಪ್ರದರ್ಶನ, ಅವಭೃತ ಸ್ನಾನ ಧ್ವಜಾವರೋಹಣ ನಡೆಯಲಿದೆ.

Edited By : Nagesh Gaonkar
Kshetra Samachara

Kshetra Samachara

27/04/2022 04:54 pm

Cinque Terre

6.35 K

Cinque Terre

0

ಸಂಬಂಧಿತ ಸುದ್ದಿ