ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು: 'ಪುತ್ತೂರು ಕಂಬಳ'ಕ್ಕೆ ಚಾಲನೆ; 250ಕ್ಕೂ ಅಧಿಕ ಕೋಣಗಳು ಕಣದಲ್ಲಿ

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಗದ್ದೆಯಲ್ಲಿ ನಡೆಯುವ ಐತಿಹಾಸಿಕ ದೇವರ ಕಂಬಳಕ್ಕೆ ಚಾಲನೆ ನೀಡಲಾಯಿತು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಕಂಬಳ ಕರೆಗೆ ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕಂಬಳವು ಮನೋ ಸ್ಥೈರ್ಯ ಮತ್ತು ಬಾಹುಬಲವನ್ನು ವೃದ್ಧಿಸುವ ಕ್ರೀಡೆಯಾಗಿದ್ಧು, ಮಿತ್ರತ್ವವನ್ನೂ ಗಟ್ಟಿಗೊಳಿಸುವ ಕ್ರೀಡೆ ಇದಾಗಿದೆ ಎಂದರು.

ಉದ್ಯಮಿ ದಿವಂಗತ ಮುತ್ತಪ್ಪ ರೈ ನೇತೃತ್ವದಲ್ಲಿ ಆರಂಭಗೊಂಡಿದ್ದ ಈ ಕಂಬಳ ಈ ಬಾರಿ 29ನೇ ವರ್ಷಾಚರಣೆಯಲ್ಲಿದ್ದು, 250ಕ್ಕೂ ಮಿಕ್ಕಿದ ಕೋಣಗಳು ಹಲವು ವಿಭಾಗದ ಓಟದಲ್ಲಿ ಭಾಗವಹಿಸಲಿದೆ. ಕಂಬಳದಲ್ಲಿ ಹಲವು ರಾಜಕೀಯ ಮುಖಂಡರು, ಚಲನಚಿತ್ರ ನಟ- ನಟಿಯರು ಪಾಲ್ಗೊಳ್ಳಲಿದ್ದಾರೆ.

Edited By :
PublicNext

PublicNext

19/03/2022 01:14 pm

Cinque Terre

50.71 K

Cinque Terre

0

ಸಂಬಂಧಿತ ಸುದ್ದಿ