ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು: ʼನಂದಿನಿ ಅವತರಣʼ ದಿನೋತ್ಸವ; ʼಸಂಗೀತಾರ್ಚನಂʼ ಭಕ್ತಿ ಸುಧೆ

ಬಜಪೆ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮಾಘ ಶುದ್ದ ಪೌರ್ಣಮಿ ʼನಂದಿನಿ ಅವತರಣʼದ ಶುಭ ದಿನವಾದ ಇಂದು ಬೆಳಿಗ್ಗೆ ಆಕಾಶವಾಣಿ ಕಲಾವಿದ, ಶಾಸ್ತ್ರೀಯ ಸಂಗೀತ ಕೃತಿ ರಚನೆಕಾರ ವಿದ್ವಾನ್ ಎಂ.ನಾರಾಯಣ ಅವರ ಸ್ವರಚಿತ ʼಭ್ರಮರಾಂಬಿಕಾʼ ಕೃತಿಗಳ ಸಂಗೀತಾರ್ಚನಂ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ದೇವಳದ ವತಿಯಿಂದ ನಾರಾಯಣ್ ಅವರಿಗೆ ʼಸಂಗೀತ ವಾಚಸ್ಪತಿʼ ಬಿರುದು ನೀಡಿ ಸನ್ಮಾನಿಸಲಾಯಿತು.

ಲಕ್ಷೀನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಹರಿನಾರಾಯಣ ದಾಸ ಆಸ್ರಣ್ಣ, ‌ಮುಂಬೈ ಉದ್ಯಮಿ ಉಮೇಶ್ ಶೆಟ್ಟಿ, ಲಿಂಗಪ್ಪ ಶೇರಿಗಾರ್ ಮತ್ತಿತರರು ಉಪಸ್ಥಿತರಿದ್ದರು. ಶ್ರೀಧರ ಹೊಳ್ಳ ನಿರೂಪಿಸಿದರು. ವಯೋಲಿನ್ ನಲ್ಲಿ ವೇಣುಗೋಪಾಲ್, ಮೃದಂಗ ರವಿಕುಮಾರ್, ಘಟಂ ತಿರುಚಿ ಕುಮಾರ್ ಮಂಗಳೂರು, ಅರುಣ ಭಟ್ ಸಹಕರಿಸಿದರು.

Edited By : Manjunath H D
Kshetra Samachara

Kshetra Samachara

16/02/2022 04:59 pm

Cinque Terre

6.12 K

Cinque Terre

0

ಸಂಬಂಧಿತ ಸುದ್ದಿ