ಮುಲ್ಕಿ: ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇಲ್ಲಿನ ಎರಡನೇ ವರ್ಷದ ತಿರುಗಾಟ ನಾಳೆ( ಮಂಗಳವಾರ) ಸೇವೆಯಾಟದೊಂದಿಗೆ ಆರಂಭವಾಗಲಿದೆ.
ಈಗಾಗಲೇ ಪೂರ್ವ ಸಿದ್ಧತೆ ನಡೆದಿದ್ದು, ಸಂಜೆ 6 ಗಂಟೆಗೆ ದೇವರಿಗೆ ವಿಶೇಷ ಪೂಜೆ ಹಾಗೂ ಕಲಾವಿದರಿಗೆ ಗೆಜ್ಜೆ ಹಸ್ತಾಂತರ ನಡೆಯಲಿದೆ.
ಕಳೆದ ಬಾರಿ ಯಶಸ್ವಿ ತಿರುಗಾಟದ ನಂತರ ಈ ಬಾರಿ ಧರ್ಮ ಸಿಂಹಾಸನ, ರಾಜಾ ಕಾಕತೀಯ, ಸತಿ ಸತ್ಯವತಿ ಎಂಬ ಮೂರು ನೂತನ ಕಲಾಕೃತಿಯೊಂದಿಗೆ ಮೇಳ ಹೊರಡಲಿದೆ. ಈ ಬಾರಿ ಖ್ಯಾತ ಅರ್ಥಧಾರಿ ದಿನೇಶ್ ಶೆಟ್ಟಿ ಕಾವಳಿಕಟ್ಟೆ ಮತ್ತು ಸಚಿನ್ ಉದ್ಯಾವರ ಮೇಳಕ್ಕೆ ಸೇರ್ಪಡೆಗೊಂಡಿದ್ದು, ಬುಧವಾರದಿಂದ ಮೇಳ ತಿರುಗಾಟ ನಡೆಸಲಿದೆ.
Kshetra Samachara
15/11/2021 10:50 pm