ಉಡುಪಿ: ಉಡುಪಿಯ ಶ್ರೀ ಕೃಷ್ಣಮಠದಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಇಂದು ಪರ್ಯಾಯ ಮಠಾಧೀಶರಾದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಗೋಪೂಜೆ ಜರುಗಿತು.
ಶ್ರೀ ಕೃಷ್ಣಮಠದ ಕನಕನ ಕಿಂಡಿಯ ಎದುರುಗಡೆ ದೀಪಾವಳಿಯ ಬಲಿ ಪಾಡ್ಯದಂದು ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಗೋಗ್ರಾಸ ನೀಡಿದ ಬಳಿಕ ಮಠದ ಪುರೋಹಿತರಾದ ಮುದರಂಗಡಿ ಲಕ್ಷ್ಮೀಶ ಆಚಾರ್ಯರು “ಗೋ ಪೂಜೆ” ನಡೆಸಿದರು.
ಬಳಿಕ ರಥಬೀದಿಯಲ್ಲಿ ವಾದ್ಯ ಮೇಳಗಳೊಂದಿಗೆ ಗೋವುಗಳ ಮೆರವಣಿಗೆ ನಡೆಯಿತು.
Kshetra Samachara
05/11/2021 01:24 pm