ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕೃಷ್ಣಮಠದ ದ್ವೈವಾರ್ಷಿಕ ಪರ್ಯಾಯದ ಪಂಚಶತಮಾನೋತ್ಸವ

ಉಡುಪಿ: ದ್ವೈವಾರ್ಷಿಕ ಪರ್ಯಾಯದ ಪಂಚ ಶತಮಾನೋತ್ಸವ ಕಾರ್ಯಕ್ರಮವು ಜನವರಿ 16ರಿಂದ 23ರ ನಡೆಯಲಿದೆ ಎಂದು ಪರ್ಯಾಯ ಅದಮಾರು ಮಠದ ದಿವಾನರಾದ ಲಕ್ಷ್ಮೀನಾರಾಯಣ ಮುಂಚಿತ್ತಾಯ ಮತ್ತು ವ್ಯವಸ್ಥಾಪಕ ಗೋವಿಂದರಾಜ್ ತಿಳಿಸಿದ್ದಾರೆ.

ಶ್ರೀವಾದಿರಾಜ ಶ್ರೀಪಾದರಿಂದ ಪ್ರಾರಂಭಿಸಲ್ಪಟ್ಟ ದ್ವೈವಾರ್ಷಿಕ ಪರ್ಯಾಯ ಮಹೋತ್ಸವದ ಶತಮಾನೋತ್ಸವ ಈ ವರ್ಷ ಆಗಿರುವುದರಿಂದ ಪರ್ಯಾಯ ಅದಮಾರು ಶ್ರೀಗಳು ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲು ತೀರ್ಮಾನಿಸಿದ್ದಾರೆ. ಈ ಸಂಬಂಧ ಜನವರಿ 14 ರಿಂದ 21ತನಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರಾಜಾಂಗಣದಲ್ಲಿ ಆಯೋಜಿಸಲಾಗಿದೆ .ಎಂಟು ದಿನಗಳ ಉತ್ಸವದ ವೇಳೆ ಪ್ರತಿದಿನ ಸಂಜೆ ಏಳಕ್ಕೆ ತುಳು ಸಂಸ್ಕೃತಿ ಸಂಭ್ರಮ, ತಾಳಮದ್ದಳೆ, ಭಕ್ತಿ ಸಂಗೀತ, ವೇಣುವಾದನ, ಬಡಗುತಿಟ್ಟು ಯಕ್ಷಗಾನ, ಶಾಸ್ತ್ರೀಯ ಹಿಂದುಸ್ತಾನಿ ಸಂಗೀತ, ವೀಣಾ ವಾದನ ಮುಂತಾದ ಕಾರ್ಯಕ್ರಮಗಳು ಜರುಗಲಿವೆ.

ಜನವರಿ 18ರಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಕೃಷ್ಣಮಠಕ್ಕೆ ಆಗಮಿಸಲಿದ್ದಾರೆ. ಭಕ್ತರಿಗೆ ಶ್ರೀಕೃಷ್ಣ ದೇವರ ದರ್ಶನಕ್ಕೆ ಅನುಕೂಲವಾಗುವಂತೆ ನೂತನವಾಗಿ ನಿರ್ಮಿಸಿದ ಮಾರ್ಗವನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಅಂದು ಉದ್ಘಾಟಿಸಲಿದ್ದಾರೆ ಎಂದು ಮಠದ ವ್ಯವಸ್ಥಾಪಕ ಗೋವಿಂದರಾಜ ತಿಳಿಸಿದರು.

Edited By : Manjunath H D
Kshetra Samachara

Kshetra Samachara

15/01/2021 11:26 am

Cinque Terre

14.6 K

Cinque Terre

0

ಸಂಬಂಧಿತ ಸುದ್ದಿ