ಮುಲ್ಕಿ: ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತರ ಪರಿಷತ್ (ತ್ರಿ ಮತಸ್ಥ) ದ.ಕ. ಜಿಲ್ಲೆಯ ಮುಲ್ಕಿ ತಾಲೂಕು ಘಟಕದ ಉದ್ಘಾಟನೆ ಪಡುಪಣಂಬೂರು ಹೊಯಿಗೆ ಗುಡ್ಡೆ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆಯಿತು. ಬ್ರಹ್ಮಶ್ರೀ ವೇ.ಮೂ. ಶಿಬರೂರು ವೇದವ್ಯಾಸ ತಂತ್ರಿಗಳು ದೀಪ ಬೆಳಗಿಸಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಬ್ರಾಹ್ಮಣರು ಶಾಂತಿಪ್ರಿಯರಾಗಿದ್ದು ಸಂಘಟನೆ ಮತ್ತು ಶಿಸ್ತು ಒಗ್ಗೂಡಿಸಿಕೊಂಡು ಹಚ್ಚಿದ ದೀಪ ದೇಶಾದ್ಯಂತ ಪಸರಿಸಲಿ ಎಂದು ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ದ.ಕ. ಜಿಲ್ಲಾ ಅರ್ಚಕ ಪುರೋಹಿತ ಪರಿಷತ್ ಅಧ್ಯಕ್ಷ ಕೃಷ್ಣರಾಜ ಪಿ. ಭಟ್ ವಹಿಸಿ ಮಾತನಾಡಿ, ಸಮಾಜದ ಗೌರವ ಉಳಿಸಿಕೊಳ್ಳಲು ಸಂಘಟನೆ ಪೂರಕವಾಗಿದ್ದು, ಸಂಕಷ್ಟದಲ್ಲಿರುವ ಬ್ರಾಹ್ಮಣರಿಗೆ ನೆರವಾಗಿ ಸಮಾಜದಲ್ಲಿ ಸದೃಢತೆ, ಅವಕಾಶ ಸದುಪಯೋಗಿಸಿಕೊಂಡು ಧಾರ್ಮಿಕತೆ ಮೂಲಕ ದೇಶಕ್ಕೆ ಮಾದರಿಯಾಗಬೇಕು ಎಂದರು. ಮುಖ್ಯ ಅತಿಥಿಗಳಾಗಿ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಮಾತನಾಡಿ, ಸಮಾಜದಲ್ಲಿ ದೃಷ್ಟಿಕೋನ ಬದಲಾಯಿಸಿದಾಗ ಒಳ್ಳೆಯತನ ಕಾಣಸಿಗುತ್ತಿದ್ದು ಮುಲ್ಕಿ ವಲಯ ಅಧ್ಯಕ್ಷರಾಗಿ ಆಯ್ಕೆಯಾದ ಕೊಲಕಾಡಿ ವಾದಿರಾಜ ಉಪಾಧ್ಯಾಯರ ನೇತೃತ್ವದಲ್ಲಿ ಸಂಘಟನೆ ಮತ್ತಷ್ಟು ಬಲಿಷ್ಠ ಗೊಳ್ಳಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭ ಮುಲ್ಕಿ ತಾಲೂಕು ಘಟಕದ ಅಧ್ಯಕ್ಷರಾಗಿ ವೇ.ಮೂ. ವಾದಿರಾಜ ಉಪಾಧ್ಯಾಯ ಕೊಲಕಾಡಿ , ವೇ.ಮೂ. ಕೃಷ್ಣಪ್ರಸಾದ್ ಭಟ್ ಪುನರೂರು ಪ್ರಧಾನ ಕಾರ್ಯದರ್ಶಿಗಳಾಗಿ ಹಾಗೂ ಮುಲ್ಕಿ ವಲಯದ ಸದಸ್ಯರು ಅಧಿಕಾರ ಸ್ವೀಕರಿಸಿದರು. ವೇದಿಕೆಯಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಗಿರಿ ಪ್ರಕಾಶ್ ತಂತ್ರಿ, ಭುವನಾಭಿರಾಮ ಉಡುಪ, ಜಿಲ್ಲಾ ಸಮಿತಿಯ ಪ್ರಶಾಂತ್ ಗೋರೆ, ನಿರ್ದೇಶಕ ಸುಬ್ರಹ್ಮಣ್ಯ ಭಟ್ ,ಮಹೇಶ್ ಮೂರ್ತಿ, ಮಂಗಳೂರು ಪ್ರತಿನಿಧಿ ರಂಗ ಐತಾಳ್, ಮೂಡಬಿದ್ರೆ ಹಾಗೂ ಬೆಳ್ತಂಗಡಿ ವಲಯ ಅಖಿಲ ಕರ್ನಾಟಕ ಬ್ರಾಹ್ಮಣ ಪರಿಷತ್ತಿನ ನಿಯೋಜಿತ ಅಧ್ಯಕ್ಷರಾದ ಸುಬ್ರಹ್ಮಣ್ಯ ಭಟ್ ಗುಂಡ್ಯಡ್ಕ , ರವಿ ಭಟ್ ಪಜಿರಡ್ಕ , ಸಂಘಟನೆ ಜಿಲ್ಲಾ ಉಪಾಧ್ಯಕ್ಷ ಹರಿ ಉಪಾಧ್ಯಾಯ, ಮುಲ್ಕಿ ತಾಲೂಕು ಪ್ರಭಾರಿ ಗಳಾದ ಶಿಬರೂರು ಅನಂತಪದ್ಮನಾಭ ಆಚಾರ್ಯ, ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಹೊಳ್ಳ ಮತ್ತಿತರರು ಉಪಸ್ಥಿತರಿದ್ದರು. ಸಂಘಟನೆಗೆ ವಿಶೇಷವಾಗಿ ಶ್ರಮ ವಹಿಸಿದ ನೆಲೆಯಲ್ಲಿ ಶಿಬರೂರು ಅನಂತ ಪದ್ಮನಾಭಾಚಾರ್ಯರನ್ನು ಗೌರವಿಸಲಾಯಿತು. ಕೃಷ್ಣಪ್ರಸಾದ ಭಟ್ ವಂದಿಸಿದರು. ಶಿಬರೂರು ಅನಂತಪದ್ಮನಾಭ ಆಚಾರ್ಯ ನಿರೂಪಿಸಿದರು.
Kshetra Samachara
26/09/2020 07:47 pm