ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾರ್ಕೂರಿನಲ್ಲಿದೆ ಮಹಿಷಾಸುರನ ದೇವಸ್ಥಾನ, ಇಲ್ಲಿ ನಿತ್ಯ ನಡೆಯುತ್ತೆ ಮಹಿಷನಿಗೆ ಪೂಜೆ !

ಉಡುಪಿ: ದಸರಾ ಬಂತು ಎಂದಾಕ್ಷಣ, ಮಹಿಷ ಎನ್ನುವ ಹೆಸರು ರಾಜ್ಯದಾದ್ಯಂತ ವಿವಾದಕ್ಕೆ ಕಾರಣವಾಗುತ್ತದೆ. ದೇವಿ ಚಾಮುಂಡೇಶ್ವರಿಗೆ ಹೇಗೆ ದಸರಾ ಸಂದರ್ಭ ಪೂಜೆ ನಡೆಯುತ್ತದೆಯೋ, ಅದೇ ರೀತಿ ಮಹಿಷನನ್ನು ಪೂಜಿಸುವ ಮಹಿಷಾ ದಸರಾ ಆಚರಣೆ ನಡೆಯುತ್ತದೆ. ಇಲ್ಲಿ ವಿಶೇಷ ಏನೆಂದರೆ ಉಡುಪಿಯ ಐತಿಹಾಸಿಕ ನಗರಿ ಒಂದರಲ್ಲಿ ಇಂದಿಗೂ ಮಹಿಷಾಸುರನ ಹೆಸರಿನ ದೇವಸ್ಥಾನ ಒಂದು ಇದೆ. ಇಲ್ಲಿ ನಿತ್ಯವೂ ಮಹಿಷನಿಗೆ ಪೂಜೆಯಾಗುತ್ತದೆ ಎಂದರೆ ನೀವು ನಂಬಲೇಬೇಕು!

ಒಂದು ಪಂಥ ಮಹಿಷಾ ಅಸುರ, ಅವನನ್ನು ಪೂಜಿಸಬಾರದು ಎಂದರೆ, ಇನ್ನೊಂದು ಪಂಥ ಮಹಿಷಾ ಎಂದರೆ ನಮ್ಮ ರಾಜ, ಅವನನ್ನು ನಾವು ಪೂಜಿಸುತ್ತೇವೆ ಎನ್ನುವ ಗೊಂದಲದಿಂದಾಗಿ ದೊಡ್ಡ ಚರ್ಚೆಯೇ ಈಗ ನಡೆಯುತ್ತಿವೆ. ಸಾಕಷ್ಟು ಗೊಂದಲಕ್ಕೆ ಈಡು ಮಾಡುವ ಈ ವಿಚಾರಕ್ಕೆ ಉಡುಪಿ ಜಿಲ್ಲೆಯ ಕರಾವಳಿಯಲ್ಲಿ ಸ್ಪಷ್ಟ ಉತ್ತರ ಸಿಕ್ಕಿದೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಕರಾವಳಿಯ ಐತಿಹಾಸಿಕ ನಗರಿ ಬಾರ್ಕೂರಿಲ್ಲಿ ಮಹಿಷಾ ಹೆಸರಿನ ದೇವಾಲಯವಿದೆ, ಅದಕ್ಕೆ ನಿತ್ಯವೂ ಪೂಜೆ ನಡೆಯುತ್ತಿದೆ.

ಇಲ್ಲಿನ ಅರ್ಚಕರು ತಿಳಿಸುವಂತೆ ಇಲ್ಲಿ ಮಹಿಷ ಎನ್ನುವ ಹೆಸರಿನ ಶಿವಗಣಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಶಿವನ ಪ್ರಥಮ ಗಣ ಎಂದು ಇಲ್ಲಿ ನಿತ್ಯವೂ ಮಹಿಷನಿಗೆ ಪೂಜೆಯ ಜೊತೆ ವರ್ಷಕ್ಕೆ ಒಮ್ಮೆ ತೊಟ್ಟಿಲು ಸೇವೆ ನಡೆಯುತ್ತದೆ. ಇನ್ನು ಕರಾವಳಿ ಈ ಹಿಂದೆ ಮಹಿಷ ಮಂಡಲ ಎಂದು ಗುರುತಿಸಿಕೊಳ್ಳುತ್ತಿದ್ದು ಇಲ್ಲಿಗೆ ಮಹಿಷ ಎನ್ನುವ ರಾಜನಿದ್ದ ಎನ್ನುವ ಪ್ರತೀತಿಯಿದೆ. ಹೀಗಾಗಿ ಮಹೇಶ ಅಂದರೆ ಮಹಿ ಅಂದರೆ ಭೂಮಿ, ಈಶ ಎಂದರೆ ಒಡೆಯ ಅಂದರೆ ಚಕ್ರವರ್ತಿ ಎನ್ನುವ ಕಾರಣಕ್ಕೆ ಇಲ್ಲಿ ಮಹಿಷನಿಗೆ ನಿತ್ಯ ಪೂಜೆ ನಡೆಯುತ್ತದೆ ಎನ್ನುವುದು ಇತಿಹಾಸ ತಜ್ಞರ ಮಾತು.

ಕ್ರಿಸ್ತಶಕ ನಾಲ್ಕನೇ ಶತಮಾನಕ್ಕೆ ಸೇರಿದ ಇಲ್ಲಿನ ಮಹಿಷನ ವಿಗ್ರಹ ಕೋಣದ ತಲೆ ಮಾನವನ ದೇಹದಲ್ಲಿ ಇತ್ತು. ಆನಂತರ ಸಾವಿರದ ಒಂಬೈನೂರು ಎಪ್ಪತ್ತೊಂದರಲ್ಲಿ ದೇವಳದ ಜೀರ್ಣೋದ್ಧಾರ ಸಂದರ್ಭ ಬೇರೆಯ ವಿಗ್ರಹ ತಂದು ಪ್ರತಿಷ್ಠಾಪನೆ ಮಾಡಿ ಕೋಣದ ತಲೆಯ ಮಾನವ ದೇಹದ ಮತ್ತೊಂದು ವಿಗ್ರಹವನ್ನು ಕೂಡ ಪ್ರತಿಷ್ಠಾಪಿಸಿ ಇದರ ಜೊತೆಗೆ ಉಳಿದ ದೈವಗಳನ್ನು ತಂದು ಕೂರಿಸಿ ಇಲ್ಲಿ ನಿತ್ಯ ಪೂಜೆ ಮಾಡಲಾಗುತ್ತಿದೆ.

Edited By : Suman K
PublicNext

PublicNext

05/10/2024 01:54 pm

Cinque Terre

24.98 K

Cinque Terre

0

ಸಂಬಂಧಿತ ಸುದ್ದಿ