ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುದ್ರಿಪದವು: ಪರಿಸರ ಸ್ನೇಹಿ ಗಣಪತಿ ನಿರ್ಮಾಣದಲ್ಲಿ ಸದಾಶಿವ ಪೂಜಾರಿ ಎತ್ತಿದ ಕೈ!!

ಮುಲ್ಕಿ: ಕಿನ್ನಿಗೋಳಿ ಸಮೀಪದ ಕುದ್ರಿಪದವು ಸವಿತಾ ಆರ್ಟ್ಸ್ ಕೇಂದ್ರದಲ್ಲಿ ಕಳೆದ ಏಳು ತಿಂಗಳಿಂದ ಕಾರ್ಯ ಪ್ರವೃತ್ತರಾಗಿರುವ ಸದಾಶಿವ ಪೂಜಾರಿ ಕಳೆದ 38 ವರ್ಷಗಳಿಂದ ಗಣಪತಿ ವಿಗ್ರಹ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ,

ಗ್ರಾಮೀಣ ಪರಿಸರದಲ್ಲಿ ಹುಟ್ಟಿ, ಬೆಳೆದು, ಕಲಾ ಸೇವೆಗೈಯುತ್ತಿರುವ ಸದಾಶಿವ ಪೂಜಾರಿ ಒಂದು ಅಡಿಯಿಂದ ಏಳು ಅಡಿಯವರೆಗಿನ ತೊಭತ್ತಾರು ಗಣಪತಿ ವಿಗ್ರಹಗಳನ್ನು ಮಾಡುತ್ತಿದ್ದಾರೆ

ಕಿನ್ನಿಗೋಳಿ ಪರಿಸರದ ರಾಜರತ್ನಪುರ, ನಿಡ್ಡೋಡಿ, ಕೊಂಡೇಮೂಲ, ನೀರುಡೆ, ಏಳಿಂಜೆ, ವೇಣೂರು, ಕಾಶಿಪಟ್ನ ಹೀಗೆ ಹತ್ತಕ್ಕೂ ಹೆಚ್ಚು ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಗಣಪತಿಗಳನ್ನು ಮಾಡುತ್ತಿದ್ದಾರೆ. ಉಳಿದಂತೆ ವಿವಿಧ ಮನೆಗಳಲ್ಲಿ ಪೂಜಿಸಲ್ಪಡುವ ಗಣಪತಿ ವಿಗ್ರಹಗಳಾಗಿದೆ.

ಕುಂದಾಪುರ ಟೈಲ್ಸ್ ಕಂಪನಿಯಿಂದ ಆವೆಮಣ್ಣು ತರಿಸಿ ಕಳೆದ ಫೆಬ್ರವರಿಯಲ್ಲೇ ಗಣಪತಿ ನಿರ್ಮಾಣ ಕಾರ್ಯ ಆರಂಭಿಸಿದ್ದಾರೆ. ಕಲಾವಿದ ಮನಸ್ಥಿತಿಯ ತಾಳ್ಮೆ ಬಯಸುವ ಕೆಲಸಗಾರರ ಸಮಸ್ಯೆ ಇದೆ ಎನ್ನುವ ಸದಾಶಿವರು ತಮ್ಮ ಪತ್ನಿ, ಮಗಳೊಂದಿಗೆ ಸೇರಿಕೊಂಡು ಪರಿಸರ ಸ್ನೇಹಿ ಗಣಪತಿ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ.

ಶಾರದೆ, ಏಸುಕ್ರಿಸ್ತ, ಮೇರಿಯಮ್ಮ ಮೊದಲಾದ ವಿಗ್ರಹಗಳನ್ನು ಮಣ್ಣಿನಿಂದ ಅತ್ಯಂತ ಕಲಾತ್ಮಕವಾಗಿ ನಿರ್ಮಿಸುವಲ್ಲಿ ಸಿದ್ಧಹಸ್ತರಾಗಿರುವ ಸದಾಶಿವರವರು ಚಿತ್ರ ಕಲಾವಿದರೂ ಆಗಿದ್ದು, ಸೈನ್ ಬೋರ್ಡುಗಳನ್ನು ಹಾಗೂ ಲಘು ಹಾಗು ಘನ ವಾಹನಗಳ ಸ್ಪ್ರೇ ಪೈಟಿಂಗ್, ಯಕ್ಷಗಾನ, ನಾಟಕಗಳ ಪ್ರಸಾದನ, ಯಕ್ಷಗಾನ ಸ್ಮರಣಿಕೆಗಳ ತಯಾರಿ, ರಂಗವೇದಿಕೆಗಳಲ್ಲಿ ಚಿತ್ರ ಬಿಡಿಸುವುದು ಹೀಗೆ ನಾನಾ ಕೆಲಸಗಳಲ್ಲಿ ಕ್ರಿಯಾಶೀಲರಾಗಿದ್ದು ಕಲಾವಿದನಿಗೆ ಇನ್ನಷ್ಟು ಪ್ರೋತ್ಸಾಹ ಸಿಗಬೇಕಾಗಿದೆ.

Edited By : Nagesh Gaonkar
Kshetra Samachara

Kshetra Samachara

29/08/2022 05:42 pm

Cinque Terre

5.28 K

Cinque Terre

0

ಸಂಬಂಧಿತ ಸುದ್ದಿ