ಮಂಗಳೂರು: ಕರಾವಳಿಯ ಪ್ರಭಾವಳಿಗೆ ಅಧಿಕ ಮೆರುಗು ನೀಡುವುದು ಮತ್ಸ್ಯ ಗಾರಿಕೆ ಎಂಬುದು ಸರ್ವ ವೇದ್ಯ.
ಈ ಹಿನ್ನೆಲೆಯಲ್ಲಿ ಮಂಗಳೂರಿನ "ಫಿಕ್ಸೆನ್ಸಿಲ್ " ಚಿತ್ರ ಕಲಾವಿದರ ಟೀಮ್, ಉರ್ವಾ ಮಾರುಕಟ್ಟೆ (ಉರ್ವಾ ಸರ್ಕಲ್) ಸಮೀಪದ ಕಟ್ಟಡವೊಂದರ ವಿಶಾಲ ಗೋಡೆಯಲ್ಲಿ ಮೀನು ಮಾರಾಟದ ಭಂಗಿಯಲ್ಲಿರುವ ಸಾಮಾನ್ಯ ಮಹಿಳೆಯೊಬ್ಬರ ಬೃಹತ್ ಚಿತ್ರ ಬಿಡಿಸುವ ಮೂಲಕ ಜನಮನ ಸೆಳೆದಿದೆ.
ವಿಭಿನ್ನ ಆಲೋಚನೆ, ವಿನೂತನ ವಿಶೇಷ ಚಿತ್ರಕಲಾ ಶೈಲಿಯನ್ನು ಮೈಗೂಡಿಸಿಕೊಂಡಿರುವ ಈ "ಫಿಕ್ಸೆನ್ಸಿಲ್ " ಕಲಾ ತಂಡದ ಸಾರಥ್ಯವನ್ನು ವಿನೋದ್ ಚಿಲಿಂಬಿ ಅವರು ವಹಿಸಿಕೊಂಡಿದ್ದು, ಪೃಥ್ವಿರಾಜ್ ಮರೋಳಿ ಜಯನಗರ, ಅಭಿಜಿತ್ ಬಿಜೈ, ಅಜೀಶ್ ಸಜಿಪಮೂಡ, ನಿತೇಶ್ ಕನ್ಯಾಡಿ ಮತ್ತಿ ತರ ಕಲಾಸಂಪನ್ನರಿದ್ದಾರೆ.
ಈ ಕಲಾಕಾರರ ತಂಡ ಇತ್ತೀಚೆಗೆ ಮಂಗಳೂರಿನ ಚಿಲಿಂಬಿ ಮಹಾದ್ವಾರದ ಬಳಿಯ ವಯೋವೃದ್ಧರೊಬ್ಬರ ಮನೆಯ ಗೋಡೆಯಲ್ಲಿ ಅವರದೇ ಬೃಹತ್ ಚಿತ್ರ ಬಿಡಿಸಿ, ಸಮಾಜಕ್ಕೆ ಮಾದರಿ ಜೀವನ ಸಂದೇಶ ನೀಡಿತ್ತು.
ಹೀಗೆ ಚಿತ್ರದ ಚಿತ್ತಾರ ಮೂಲಕ ಸಮಾಜಮುಖಿ, ಜೀವನ್ಮುಖಿ ಸಂದೇಶ ಸಾರುವ ಸೇವಾ ಕೈಂಕರ್ಯ ದಲ್ಲಿ ತೊಡಗಿರುವ ಸಹೃದಯಿ ಯುವಕರ ತಂಡದ ಹೊಸತನದ ಸಾಧನೆಯ ಚಿತ್ರಣ ನಾನಾ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗುತ್ತಿದ್ದು, ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
Kshetra Samachara
29/09/2020 02:02 pm