ಮಂಗಳೂರು: ಈ ಸಲದ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ರ‍್ಯಾಂಕ್ ಪಡೆದ ಮಂಗಳೂರಲ್ಲಿ ವಿವಿಧ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ ಇಲ್ಹಾಮ್ ಅವರಿಗೆ ಸನ್ಮಾನ ಕಾರ್ಯಕ್ರಮವು ಇಂದು ಸಂಜೆ ಮಂಗಳೂರು ನಗರದ ಸಿಟಿ ಗೋಲ್ಡ್ ಸಭಾಂಗಣದಲ್ಲಿ ನಡೆಯಿತು.
ಇದೇ ವೇಳೆ ವಕ್ಫ್ ಜಿಲ್ಲಾಧ್ಯಕ್ಷ ನಾಸೀರ್ ಲಕ್ಕಿ ಸ್ಟಾರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಇದೇ ವೇಳೆ ಪ್ರೈಡ್ ಬ್ರೈಡ್ ಡೈಮಂಡ್ ಫೆಸ್ಟಿವಲ್ ಪ್ರಯುಕ್ತ ಆರ್‌ಯು ದಿ ಡೈಮಂಡ್ ಸ್ಟಾರ್ ಎಂಬ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ಆರ್ ಯು ದಿ ಡೈಮಂಡ್ ಸ್ಟಾರ್ ಸ್ಪರ್ಧೆಯಲ್ಲಿ ವಿಜೇತರಾದ ಮೂಡುಬಿದಿರೆಯ ಲಾಮಿ ಮಿರಾಲ, ಮಂಗಳೂರಿನ ಆಯಿಝಾ ಫಾತಿಮಾ, ಕೃಷ್ಣಾಪುರದ ದುಆ ಅವರಿಗೆ ಬಹುಮಾನ ವಿತರಿಸಲಾಯಿತು.
Kshetra Samachara
01/07/2022 08:29 pm