ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಹೊಸ ಶಿಕ್ಷಣ ನೀತಿಯನ್ನು ತಿಳಿಸುವ ಪ್ರಯತ್ನ; ಬಿಇಒ ಕಚೇರಿಯ ಗೋಡೆಯ ಮೇಲೆ ಮೂಡಿವೆ ರಂಗಿನ ಚಿತ್ತಾರಗಳು

ಮಂಗಳೂರು: ಕೇಂದ್ರ ಸರಕಾರ ಹೊಸ ಶಿಕ್ಷಣ ನೀತಿ(ಎನ್ಇಪಿ)ಯನ್ನು ಜಾರಿಗೊಳಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ‌. ಆದರೆ ಈಗಷ್ಟೇ ಜಾರಿಗೆ ಬಂದಿರುವ ಎನ್ಇಪಿಯ ಬಗ್ಗೆ ಇನ್ನಷ್ಟೇ ಅರಿವು ಮೂಡಬೇಕಿದೆ. ಹಾಗಾಗಿ ನಗರದ ಸರಕಾರಿ ಕಟ್ಟಡವೊಂದರಲ್ಲಿ ಎನ್ಇಪಿಯ ಒಳಮರ್ಮವನ್ನು ಚಿತ್ರಗಳ ಮೂಲಕ ತಿಳಿಸುವ ಪ್ರಯತ್ನ ಮಾಡಲಾಗಿದೆ.

ನಗರದ ಬೋಳಾರದಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ(ಬಿಇಒ) ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರದ ಗೋಡೆಗಳ ಮೇಲೆ ಇನ್ಇಪಿ ಬಗ್ಗೆ ಜಾಗೃತಿ, ಅರಿವು ಮೂಡಿಸುವ ಚಿತ್ರಗಳನ್ನು ಬಿಡಿಸಲಾಗಿದೆ. ನಗರದ ವಿವಿಧ ಸರ್ಕಾರಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 11 ಮಂದಿ ಮಹಿಳಾ ಹಾಗೂ ಪುರುಷ ಚಿತ್ರಕಲಾ ಶಿಕ್ಷಕರೇ ಬಿಡಿಸುತ್ತಿದ್ದು. ಸುಮಾರು ಒಂದು ತಿಂಗಳಿನಿಂದ ಇಲ್ಲಿನ ಗೋಡೆಗಳು, ಕಂಪೌಂಡ್​ ಆವರಣಗಳಲ್ಲಿ ಪೂರ್ತಿ ಈ ಶಿಕ್ಷಕರು ತಮ್ಮ ಕೈಚಳಕದಿಂದ ಚಿತ್ರಗಳನ್ನು ಬಿಡಿಸುತ್ತಿದ್ದಾರೆ.

ಇಲ್ಲಿನ ಗೋಡೆಗಳಲ್ಲಿ ಮೂಡಿರುವುದು ಆಕರ್ಷಣೆಗೆ ಬಿಡಿಸಿರುವ ಚಿತ್ರಗಳಲ್ಲ, ಚಿಂತನೆಯ ಒರೆಗೆ ಹಚ್ಚಲಿರುವ ಚಿತ್ತಾರಗಳು. ಸಾಕಷ್ಟು ವರ್ಷಗಳ ಬಳಿಕ ಕೇಂದ್ರ ಸರ್ಕಾರವು ಶಿಕ್ಷಣದಲ್ಲಿ ಬದಲಾವಣೆ ತರುವ ಉದ್ದೇಶದಿಂದ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದೆ. ಆದ್ದರಿಂದ ಎನ್ಇಪಿಯನ್ನು ಚಿತ್ರಗಳ ಮೂಲಕ ತಿಳಿಸುವ ಪ್ರಯತ್ನ ನಡೆಸಲಾಗುತ್ತದೆ. ಜೊತೆಗೆ ಕಲಾ ಚಿತ್ರಗಳು, ಆಫ್ರಿಕನ್ ಆರ್ಟ್ ಮಾದರಿಯ ಚಿತ್ರಗಳು, ಮಧುಬನಿ ಚಿತ್ರಕಲೆ, ಗಂಜೀಫಾ ಚಿತ್ರಕಲೆ, ತುಳುನಾಡಿನ ಆಚರಣೆ-ಆರಾಧನೆ ಸಾಂಸ್ಕೃತಿಕ ವೈಭವಗಳ ಚಿತ್ರಗಳು, ಹೊರರಾಜ್ಯಗಳ ನೃತ್ಯಪ್ರಕಾರಗಳ ಚಿತ್ರಗಳನ್ನು ರಚಿಸಲಾಗಿದೆ. ಪ್ರಸ್ತುತ ಬದಲಾವಣೆಗೊಂಡ ಶಿಕ್ಷಣದ ವಿನೂತನ ಆಯಾಮಗಳಿಗೆ ಪೂರಕವಾಗಿ ಈ ಚಿತ್ರಗಳನ್ನು ರಚಿಸಲಾಗಿದೆ. ಈ ಹೊಸ ಪರಿಕಲ್ಪನೆಯ ಶಿಕ್ಷಣದ ಬಗ್ಗೆ ಶಿಕ್ಷಕರು ಚಿಂತನೆ ನಡೆಸಿ ತಮ್ಮ ಬೋಧನೆಗಳಲ್ಲಿ ಇದನ್ನು ತೊಡಗಿಸಿಕೊಳ್ಳುವ ಕಾರ್ಯ ಆಗಬೇಕೆಂಬ ಮುಂದಾಲೋಚನೆ ಈ ಕಾರ್ಯದ ಹಿಂದೆ ಅಡಗಿದೆ.

Edited By : Nagesh Gaonkar
Kshetra Samachara

Kshetra Samachara

11/10/2021 10:04 pm

Cinque Terre

18.81 K

Cinque Terre

0

ಸಂಬಂಧಿತ ಸುದ್ದಿ