ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಂಡ್ಸೆ: ಚಿಣ್ಣರಿಗೆ ನವ ಚೈತನ್ಯ ತಂದ ಯಕ್ಷ ಪಾಠ; ಮುದುಡಿದ ಮನ ಅರಳಿದವು ಹೀಗೆ...

ವರದಿ: ಸಂದೇಶ್ ಶೆಟ್ಟಿ ಆಜ್ರಿ, ಪಬ್ಲಿಕ್ ನೆಕ್ಸ್ಟ್ ಉಡುಪಿ

ಕುಂದಾಪುರ: ಕೊರೊನಾದಿಂದಾಗಿ ಇಡೀ ಜಗತ್ತು, ದೇಶವೇ ತತ್ತರಿಸಿ ಹೋಗಿತ್ತು. ಹಲವು ಉದ್ಯೋಗಗಳ ಮೇಲೆ ಕೊರೊನಾ ಕರಿಛಾಯೆ ಮೂಡಿಸಿತ್ತು. ಪ್ರತಿ ಕುಟುಂಬವೂ ತಮ್ಮನ್ನು ತಾವು ನಿಭಾಯಿಸಿಕೊಳ್ಳಲಾಗದೆ, ಮಕ್ಕಳ ಮಾನಸಿಕ ಸ್ಥಿತಿಯೂ ಕ್ಷೀಣಿಸುತ್ತಿರುವಾಗ ದಾರಿ ತೋಚದಂತೆ ಹಲವು ಕುಟುಂಬಗಳು ಪರದಾಡಿದ್ದು ಕಟು ವಾಸ್ತವ. ಆದರೆ, ಇದೀಗ ಉಡುಪಿ ಜಿಲ್ಲೆಯ ವಂಡ್ಸೆ ಯ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳ ಮಾನಸಿಕ ಸ್ಥಿತಿ ವೃದ್ಧಿಸುವಂತಹ ಕಲೆ ಯಕ್ಷಗಾನದ ಹೆಜ್ಜೆ- ಗೆಜ್ಜೆಯ ಧ್ವನಿ ಮೊಳಗುತ್ತಿದೆ.

ಕುಂದಾಪುರ ಸಮೀಪದ ವಂಡ್ಸೆ ಭಾಗದಲ್ಲಿಯೂ ಮಕ್ಕಳು ಇತರೆಡೆಯಂತೆ ಕೊರೊನಾ ಮುಂಜಾಗ್ರತೆಯಿಂದಾಗಿ ಮನೆಯಲ್ಲಿಯೇ ಕೂರಬೇಕಾದ ಪರಿಸ್ಥಿತಿ ಎದುರಾಗಿತ್ತು. ಇಂತಹ ಸಂದರ್ಭ ಸ್ಥಳೀಯ ಶ್ರೀ ಸಾಯಿ ಕಲ್ಚರಲ್ ಮತ್ತು ಸ್ಪೋರ್ಟ್ಸ್ ಕ್ಲಬ್, ಮಕ್ಕಳ ಈ ಬೇಸರ ನಿವಾರಿಸುವ ಜೊತೆಗೆ ಕರಾವಳಿಯ ಗಂಡು ಕಲೆಯನ್ನು ಮಕ್ಕಳಿಗೆ ಪರಿಚಯಿಸುವ ಉದ್ದೇಶಕ್ಕೆ ಯಕ್ಷಗಾನ ತರಬೇತಿ ತರಗತಿ ಪ್ರಾರಂಭಿಸಿತ್ತು. ಇದು ಮಕ್ಕಳ ಪಾಲಿಗೆ ವರವಾಗಿ ಪರಿಣಮಿಸಿದ್ದಲ್ಲದೆ, ಯಕ್ಷ ಶಿಕ್ಷಣವನ್ನು ಕೂಡ ಪಸರಿಸಲು ಸಹಕಾರಿಯಾಗಿದೆ.

"ಒಂದು ತಿಂಗಳಿನಿಂದ ಇಲ್ಲಿ ಯಕ್ಷಗಾನ ಶಿಕ್ಷಣ ಮಕ್ಕಳಿಗೆ ನೀಡಲಾಗುತ್ತಿದೆ. ಮೊದಲು ಬೆರಳೆಣಿಕೆ ಮಕ್ಕಳು ಹಾಜರಾಗುತ್ತಿದ್ದ ತರಗತಿಯಲ್ಲಿ ಸದ್ಯ ೩೦ ಮಕ್ಕಳು ಯಕ್ಷಗಾನ ಕಲಿಯುತ್ತಿದ್ದಾರೆ. ನುರಿತ ಯಕ್ಷಗಾನ ಕಲಾವಿದೆ ಅಶ್ವಿನಿ ಕೊಂಡದಕುಳಿ ಮಕ್ಕಳಿಗೆ ಯಕ್ಷ ಶಿಕ್ಷಣ ನೀಡುತ್ತಿದ್ದಾರೆ. ಶ್ರೀ ಸಾಯಿ ಕಲ್ಚರಲ್ ಮತ್ತು ಸ್ಪೋಟ್ಸ್ ಕ್ಲಬ್‌ನ ಸುಸಜ್ಜಿತ ಇನ್ ಡೋರ್ ಗೇಮ್ಸ್ ಕಟ್ಟಡದಲ್ಲಿ ಸದ್ಯ ಯಕ್ಷಗಾನ ತರಗತಿ ನಡೆಯುತ್ತಿದೆ. ಕೊರೊನಾ ನಿಯಮ ಪಾಲಿಸಿಕೊಂಡು ಸದ್ಯ ಯಕ್ಷ ಶಿಕ್ಷಣ ನಡೆಯುತ್ತಿದೆ. ಪೋಷಕರು ಕೂಡ ಸಹಕಾರ ನೀಡುತ್ತಿದ್ದಾರೆ"

" ಒಟ್ಟಾರೆಯಾಗಿ ಲಾಕ್ ಡೌನ್ ಸಡಿಲಿಕೆ ಬಳಿಕ ಆರಂಭವಾದ ಯಕ್ಷಗಾನ ತರಗತಿಗೆ ಮಕ್ಕಳ ಜೊತೆ ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ. ಯಕ್ಷಗಾನ ಕಲಿಕೆ ಆರಂಭವಾದ ದಿನದಿಂದ ಮಕ್ಕಳ ಬೇಸರ ಮಾಯವಾಗಿ ಕಲೆ ಬಗ್ಗೆ ಆಸಕ್ತಿ ಮೂಡಿದ್ದು, ಶ್ರದ್ಧೆಯಿಂದ ಯಕ್ಷ ಶಿಕ್ಷಣ ಪಡೆಯುತ್ತಿದ್ದಾರೆ"

Edited By : Nagesh Gaonkar
Kshetra Samachara

Kshetra Samachara

01/11/2020 06:18 pm

Cinque Terre

28.84 K

Cinque Terre

3

ಸಂಬಂಧಿತ ಸುದ್ದಿ