ಮುಲ್ಕಿ: ಮುಲ್ಕಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಹಾತ್ಮ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆ ನಡೆಯಿತು.
ಮಾಜಿ ಸಚಿವ ಅಭಯಚಂದ್ರ ಜೈನ್ ದೀಪ ಬೆಳಗಿಸಿ ಮಾತನಾಡಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಆದರ್ಶ ಪಾಲಿಸುವಂತೆ ತಿಳಿಸಿ, ಮಹಾತ್ಮ ಗಾಂಧೀಜಿ ಅಹಿಂಸೆಯ ತತ್ವ ಪ್ರತಿಪಾದಿಸಿದ್ದು 'ಸತ್ಯಮೇವ ಜಯತೆ'ಎಂಬ ಅಂಶ ಇಟ್ಟುಕೊಂಡು ಹೋರಾಡಿ, ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಯಶಸ್ವಿಯಾಗಿದ್ದರು ಎಂದರು.
ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ಕೆಪಿಸಿಸಿ ಸದಸ್ಯ ವಸಂತ ಬರ್ನಾಡ್, ಯುವ ಕಾಂಗ್ರೆಸ್ ಅಧ್ಯಕ್ಷ ಹಕೀಂ ಕಾರ್ನಾಡು ಮುಲ್ಕಿ ನಪಂ ಸದಸ್ಯರಾದ ಬಾಲಚಂದ್ರ ಕಾಮತ್, ಯೋಗೀಶ್ ಕೋಟ್ಯಾನ್, ಸಂದೀಪ್ ಕುಮಾರ್, ಮುನ್ನ ಯಾನೆ ಮಹೇಶ್ ಕಾಂಗ್ರೆಸ್ ಮುಖಂಡರಾದ ಪದ್ಮಾವತಿ ಶೆಟ್ಟಿ, ಸಾಹುಲ್ ಹಮೀದ್, ಅಬ್ದುಲ್ ಅಜೀಜ್, ಅನಿಲ್ ಸಸಿಹಿತ್ಲು, ಶರ್ಮಿಳಾ ಹಳೆಯಂಗಡಿ, ಸೇವಾ ದಳ ಅಧ್ಯಕ್ಷರಾದ ಭೀಮಾಶಂಕರ್ ಆರ್ .ಕೆ., ಮೋಹನ್ ಕೋಟ್ಯಾನ್ ಶಿಮಂತೂರು, ಚಿರಂಜೀವಿ ಹಳೆಯಂಗಡಿ, ಉತ್ತಮ್ ಕುಮಾರ್ ಮೈಲೊಟ್ಟು, ಧನರಾಜ ಕೋಟ್ಯಾನ್ ಸಸಿಹಿತ್ಲು, ಮಯ್ಯದ್ದಿ ಪಕ್ಷಿಕೆರೆ, ದಯಾನಂದ ಮಟ್ಟು, ರಕ್ಷಿತ್ ಕೊಳಚಿಕಂಬಳ, ಅಶೋಕ್ ಪೂಜಾರ, ವಿಷ್ಣು ಪಾಟೀಲ್, ನಬಿಲಾಲ್, ರಿತೇಶ್ ಸಸಿಹಿತ್ಲು ಮತ್ತಿತರರು ಉಪಸ್ಥಿತರಿದ್ದರು.
Kshetra Samachara
02/10/2020 05:30 pm