ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಅಟಲ್ ಜೀ ಜನ್ಮದಿನ; ಶಾಸಕ ಉಮಾನಾಥ್ ರಿಂದ ರೋಗಿಗಳಿಗೆ ಹಣ್ಣು ವಿತರಣೆ

ಮುಲ್ಕಿ: ಮಾಜಿ ಪ್ರಧಾನಿ ದಿ. ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವನ್ನು ದೇಶಾದ್ಯಂತ ರೈತರ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದು,

ಅವರ ಆದರ್ಶಗಳನ್ನು ಪಾಲನೆ ಮಾಡುವ ಮುಖಾಂತರ ದೇಶವನ್ನು ಮುನ್ನಡೆಸೋಣ ಎಂದು ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಅವರು ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನದ ಪ್ರಯುಕ್ತ ಮುಲ್ಕಿ ಸಮುದಾಯ ಆರೋಗ್ಯ ಕೇಂದ್ರದ ರೋಗಿಗಳಿಗೆ ಹಣ್ಣುಹಂಪಲು ವಿತರಿಸಿ ಮಾತನಾಡಿದರು.

ಮುಲ್ಕಿ ನ.ಪಂ. ಅಧ್ಯಕ್ಷ ಸುಭಾಷ್ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಅಂಚನ್, ಸದಸ್ಯರಾದ ರಾಧಿಕಾ ಕೋಟ್ಯಾನ್, ಶಾಂತಾ ಕಿರೋಡಿಯನ್, ಶೈಲೇಶ್ ಕುಮಾರ್, ದಯಾವತಿ ಅಂಚನ್,ಬಿಜೆಪಿ ಮುಖಂಡರಾದ ಸುನಿಲ್ ಆಳ್ವ, ಜಯಾನಂದ ಮುಲ್ಕಿ, ರಮಾನಾಥ ಪೈ ಎಸ್ ವಿಟಿ, ಅಶೋಕ್ ಜನನಿ, ಹರಿಶ್ಚಂದ್ರ ಕೆಎಸ್ ರಾವ್ ನಗರ, ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಜಗದೀಶ್ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

25/12/2020 03:12 pm

Cinque Terre

8.44 K

Cinque Terre

0

ಸಂಬಂಧಿತ ಸುದ್ದಿ