ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಸುಂದರರಾಮ ಶೆಟ್ಟಿ ಪ್ರಶಸ್ತಿ ಪ್ರದಾನ, ಸಾಧಕರಿಗೆ ಸನ್ಮಾನ

ಮುಲ್ಕಿ: ಬಂಟರ ಸಂಘ ಮುಲ್ಕಿ ವತಿಯಿಂದ 2020-21ನೇ ಸಾಲಿನ ಸಹಾಯಧನ, ದತ್ತು ಸ್ವೀಕಾರ, ಪ್ರತಿಭಾ ಪುರಸ್ಕಾರ, ಮುಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿ ಪ್ರದಾನ, ಸಾಧಕರಿಗೆ ಸನ್ಮಾನ ಶುಕ್ರವಾರ ಮುಲ್ಕಿ ಬಂಟರ ಭವನದಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ವಹಿಸಿದ್ದರು. ಮೂಡಬಿದ್ರೆ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಉದ್ಘಾಟಿಸಿ ಮಾತನಾಡಿ, ಸುಂದರರಾಮ ಶೆಟ್ಟಿಯವರು ಮಾನವತೆಯ ಪ್ರತೀಕವಾಗಿದ್ದು, ಜಾತಿ-ಮತ ಭೇದವಿಲ್ಲದೆ ಬಡವರಿಗೆ ಸಹಾಯ ಮಾಡಿದ ಧೀಮಂತ ವ್ಯಕ್ತಿ ಎಂದರು. ಮುಖ್ಯಅತಿಥಿ ಮಾಜಿ ಸಚಿವ ಅಭಯಚಂದ್ರ ಮಾತನಾಡಿ, ಮುಲ್ಕಿ ಬಂಟರ ಸಂಘದ ವತಿಯಿಂದ ಕೊರೊನಾ ದಿನಗಳಲ್ಲಿಯೂ ಬಡವರ ಕಣ್ಣೀರು ಒರೆಸುವ ಕೆಲಸ ಅಭಿನಂದನೀಯ ಎಂದರು. ಜಾಗತಿಕ ಬಂಟರ ಸಂಘದ ಒಕ್ಕೂಟ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಮುಲ್ಕಿ ಸುಂದರರಾಮ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನ ಮನೋಹರ ಶೆಟ್ಟಿ, ಕಾರ್ಯದರ್ಶಿ ಕೆ.ರವಿರಾಜ ಶೆಟ್ಟಿ, ಉಪಾಧ್ಯಕ್ಷ ಪುರುಷೋತ್ತಮ ಶೆಟ್ಟಿ, ಕೋಶಾಧಿಕಾರಿ ಅಶೋಕ್ ಕುಮಾರ್ ಶೆಟ್ಟಿ, ಜೊತೆ ಕಾರ್ಯದರ್ಶಿ ಸಾಯಿನಾಥ ಶೆಟ್ಟಿ, ಯುವ ಮತ್ತು ಕ್ರೀಡಾ ವಿಭಾಗ ಸಂಚಾಲಕ ರಾಜೇಶ್ ಶೆಟ್ಟಿ, ಮಹಿಳಾ ವಿಭಾಗದ ಸಂಚಾಲಕಿ ಗೀತಾ ಜೆ.ಹೆಗಡೆ, ಪತ್ರಿಕಾ ಮತ್ತು ಪ್ರಚಾರ ವಿಭಾಗ ಸಂಚಾಲಕ ನಿಶಾಂತ್ ಶೆಟ್ಟಿ ಕಿಲೆಂಜೂರು,ಶ್ರೀಶ ಶೆಟ್ಟಿ ಐಕಳ, ಶರತ್ ಶೆಟ್ಟಿ ಕಿನ್ನಿಗೋಳಿ,ನವೀನ್ ಶೆಟ್ಟಿ ಎಡ್ಮೇಮಾರ್, ಕುಸುಮಾ ಶೆಟ್ಟಿ, ಚಂದ್ರಕಲಾ ಶೆಟ್ಟಿ ,ಅಮೂಲ್ಯ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭ 2020ರ ಮುಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿಯನ್ನು ಮಣಿಪಾಲ ವಿವಿ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಅವರಿಗೆ ನೀಡಲಾಯಿತು. ಸಾಧಕರ ನೆಲೆಯಲ್ಲಿ ಮುಲ್ಕಿ ನ.ಪಂ. ನೂತನ ಅಧ್ಯಕ್ಷ ಸುಭಾಷ್ ಶೆಟ್ಟಿ ಹಾಗೂ ವೈದ್ಯಕೀಯ ಸೇವೆಗಾಗಿ ಅಕ್ಷತಾ ಹೆಗ್ಡೆ ಯವರನ್ನು ಗೌರವಿಸಲಾಯಿತು. 2020- 21 ನೇ ಸಾಲಿನ ಸಹಾಯಧನ, ದತ್ತು ಸ್ವೀಕಾರ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ಜೊತೆ ಕಾರ್ಯದರ್ಶಿ ಸಾಯಿನಾಥ ಶೆಟ್ಟಿ ನಿರೂಪಿಸಿದರು.

Edited By : Nagesh Gaonkar
Kshetra Samachara

Kshetra Samachara

25/12/2020 02:57 pm

Cinque Terre

10.64 K

Cinque Terre

0

ಸಂಬಂಧಿತ ಸುದ್ದಿ