ಮುಲ್ಕಿ: ಮುಲ್ಕಿ ಸಮೀಪದ ಕಾರ್ನಾಡು ಶ್ರೀ ಹರಿಹರ ಕ್ಷೇತ್ರ ಯುವಕ ವೃಂದ ಮತ್ತು ಮಹಿಳಾ ಮಂಡಳಿ ವತಿಯಿಂದ ಲೋಕಕಲ್ಯಾಣಾರ್ಥವಾಗಿ ಶ್ರೀ ಸತ್ಯನಾರಾಯಣ ಪೂಜೆ ದೇವಳದ ವಠಾರದಲ್ಲಿ ನಡೆಯಿತು.
ಈ ಸಂದರ್ಭ ಅರ್ಚಕ ಹಯಗ್ರೀವ ಪಡ್ಡಿಲ್ಲಾಯ ಶ್ರೀ ಸತ್ಯನಾರಾಯಣ ಪೂಜೆ ನೆರವೇರಿಸಿ ಮಾತನಾಡಿ, ಲೋಕ ಕಂಟಕ ಕೊರೊನಾ ಮಹಾಮಾರಿ ದೂರವಾಗಿ ವಿಶ್ವದಲ್ಲಿ ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿದರು.
ಶ್ರೀ ಹರಿಹರ ದೇವಸ್ಥಾನದ ಆಡಳಿತ ಮೊಕ್ತೇಸರ ಉದ್ಯಮಿ ಎಂ.ಎಚ್. ಅರವಿಂದ ಪೂಂಜ ಮಾತನಾಡಿ, ಶ್ರೀ ಹರಿಹರ ಕ್ಷೇತ್ರದಲ್ಲಿ ಯುವಕ ವೃಂದ ಹಾಗೂ ಮಹಿಳಾ ಮಂಡಳಿ ವತಿಯಿಂದ ಕೊರೊನಾ ಜಾಗೃತಿ ಸಹಿತ ಅನೇಕ ಸೇವಾ ಕೈಂಕರ್ಯಗಳು ನಡೆಯುತ್ತಿದ್ದು, ಮತ್ತಷ್ಟು ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಜನಜಾಗೃತಿ ಮೂಡಿಸಲಿ ಎಂದರು.
ರವಿಕುಮಾರ್ ಭಟ್, ಸುಂದರ ಶೆಟ್ಟಿ ಕುಬೆವೂರು ಯುವಕ ವೃಂದ ಅಧ್ಯಕ್ಷ ಸುಧೀರ್ ಕೋಟ್ಯಾನ್, ಕಾರ್ಯದರ್ಶಿ ಹರ್ಷರಾಜ್ ಶೆಟ್ಟಿ ಜಿ.ಎಂ., ಕೋಶಾಧಿಕಾರಿ ಭಾಸ್ಕರ ಸುವರ್ಣ, ಉಪಾಧ್ಯಕ್ಷ ಯೋಗೀಶ್ ಪಯ್ಯೋಟ್ಟು, ಮಹಿಳಾ ಮಂಡಳಿ ಅಧ್ಯಕ್ಷೆ ಶೋಭಾ ಸುರೇಶ್ ರಾವ್, ಕಾರ್ಯದರ್ಶಿ ಜಾನಕಿ ಅರುಣ್ ಕುಮಾರ್, ಕೋಶಾಧಿಕಾರಿ ಎಂ. ಕಸ್ತೂರಿ ದೇವಾಡಿಗ, ಉಪಾಧ್ಯಕ್ಷೆ ಗೀತಾ ಯೋಗೀಶ್ ಸಾಲ್ಯಾನ್, ಶಿವರಾಮ ಕಾರ್ನಾಡ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
20/12/2020 10:40 pm