ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್ : ಶಿಬರೂರು ಕೊಡಮಣಿಂತ್ತಾಯ ಕ್ಷೇತ್ರದಲ್ಲಿ ವರ್ಷಾವಧಿ ಉತ್ಸವ ಸಂಭ್ರಮ

ಮುಲ್ಕಿ: ಸುರತ್ಕಲ್ ಸಮೀಪದ ಶಿಬರೂರು ಶ್ರೀ ಕೊಡಮಣಿಂತ್ತಾಯ ಕ್ಷೇತ್ರದಲ್ಲಿ ಸಂಭ್ರಮದ ವರ್ಷಾವಧಿ ಉತ್ಸವ ನಡೆಯಿತು.

ಡಿ.15ರಂದು ಸಂಜೆ ನವಕ ಕಲಶಾಭಿಷೇಕ ಹಾಗೂ ರಾತ್ರಿ 9ಕ್ಕೆ ಧ್ವಜಾರೋಹಣ ನಡೆಯಿತು. ಡಿ.16 ರಂದು ಬೆಳಿಗ್ಗೆ ತುಲಾಭಾರ ಸೇವೆ ನಡೆಯಿತು.

ಮಧ್ಯಾಹ್ನ ಶ್ರೀ ಉಳ್ಳಾಯ ದೈವದ ನೇಮೋತ್ಸವ, ಉರುಳು ಸೇವೆ, ಕಂಚೀಲು ಸೇವೆ ಹಾಗೂ ಮಹಾ ಅನ್ನ ಸಂತರ್ಪಣೆ ನಡೆಯಿತು. ಶಿಬರೂರು ಶ್ರೀ ವೇದವ್ಯಾಸ ತಂತ್ರಿ ಮಾತನಾಡಿ, ಈ ಬಾರಿ ಕೊರೊನಾದಿಂದಾಗಿ ಅತಿ ಸರಳ ರೀತಿಯಲ್ಲಿ ಉತ್ಸವ ನಡೆದಿದೆ. ಕೊರೊನಾ ವಿಶ್ವದಿಂದಲೇ ನಿರ್ಮೂಲನೆಯಾಗಲಿ ಎಂದು ಪ್ರಾರ್ಥಿಸಿದರು.

ಜಾತ್ರಾ ಮಹೋತ್ಸವಕ್ಕೆ ಈ ಬಾರಿ ವಿರಳ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಕ್ಷೇತ್ರದ ಆಡಳಿತ ಮಂಡಳಿ ವತಿಯಿಂದ ಸರಕಾರದ ನಿಯಮ ಪಾಲಿಸಿಕೊಂಡು ಭಕ್ತರನ್ನು ನಿಯಂತ್ರಿಸಲಾಗಿದೆ. ಕ್ಷೇತ್ರದಲ್ಲಿ ಯಾವುದೇ ಅಂಗಡಿಗಳಿಗೆ ಆಸ್ಪದ ನೀಡದೆ ಶಿಸ್ತಿನಿಂದಲೇ ಜಾತ್ರೆ ನಡೆಯಿತು.

Edited By : Manjunath H D
Kshetra Samachara

Kshetra Samachara

16/12/2020 07:32 pm

Cinque Terre

30.54 K

Cinque Terre

0

ಸಂಬಂಧಿತ ಸುದ್ದಿ