ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಬಪ್ಪನಾಡು ದೇವಳದಲ್ಲಿ "ಸಪ್ತಪದಿ" ಸಾಮೂಹಿಕ ವಿವಾಹ

ಮುಲ್ಕಿ: ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಮೂಲಕ ದ.ಕ. ಜಿಲ್ಲೆಯ ಎರಡು ದೇವಸ್ಥಾನಗಳಲ್ಲಿ ಆಯೋಜಿಸಿರುವ "ಸಪ್ತಪದಿ" ಸಾಮೂಹಿಕ ವಿವಾಹದಲ್ಲಿ ಮ ಮುಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನ್ನಪೂರ್ಣ ಸಭಾಗೃಹದಲ್ಲಿ ಎರಡು ಜೋಡಿಗಳ ವಿವಾಹ ಸರಕಾರದ ಆದೇಶದಂತೆ ಕೊರೊನಾ ನಿಯಮ ಪಾಲಿಸಿಕೊಂಡು ವಿಜೃಂಭಣೆಯಿಂದ ನಡೆಯಿತು.

ಬಪ್ಪನಾಡು ದೇವಳದ ಅರ್ಚಕ ಶ್ರೀಪತಿ ಉಪಾಧ್ಯಾಯ ನೇತೃತ್ವದಲ್ಲಿ ಹೆಜಮಾಡಿಯ ಸುನಿಲ್ ಬಂಗೇರ ಬೆಳ್ತಂಗಡಿ ಹೊಸಂಗಡಿ ಪೆರಿಂಜೆಯ ತಾರಾ ಹಾಗೂ ಎರ್ಮಾಳಿನ ಸುರೇಶ್- ಕಾಪು ಉಳ್ಳೂ ರಿನ ವನಿತಾ ಅವರು ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮದ ಶುಭಲಗ್ನದಲ್ಲಿ ಹಸೆಮಣೆ ಏರಿದರು.

ಈ ಸಂದರ್ಭ ದೇವಳದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ ಮಾತನಾಡಿ, ಕೊರೊನಾದಿಂದಾಗಿ ಮುಂದೂಡಲ್ಪಟ್ಟಿದ್ದ "ಸಪ್ತಪದಿ" ಸಾಮೂಹಿಕ ವಿವಾಹ ಸಮಾರಂಭ ಸರಕಾರದ ನಿರ್ದೇಶನದಂತೆ ನಡೆದಿದೆ ಎಂದರು. ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ, ನೋಡಲ್ ಅಧಿಕಾರಿ ವೆಂಕಟೇಶ ಜಿ. ಮಾತನಾಡಿ, ಮುಂದಿನ ದಿನಗಳಲ್ಲಿ ಸರಕಾರದ ವಿನೂತನ ಯೋಜನೆ ಮತ್ತಷ್ಟು ಹಮ್ಮಿಕೊಳ್ಳಲಾಗುವುದು ಎಂದರು.

ನೂತನ ವಧು-ವರರಿಗೆ ಮಾಜಿ ಸಚಿವ ಅಭಯಚಂದ್ರ ಜೈನ್,ಬಪ್ಪನಾಡು ದೇವಳದ ಅನುವಂಶಿಕ ಮೊಕ್ತೇಸರ ಹಾಗೂ ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು, ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ, ಮುಲ್ಕಿ ನ.ಪಂ. ಅಧ್ಯಕ್ಷ ಸುಭಾಷ್ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಅಂಚನ್, ಮುಖ್ಯಾಧಿಕಾರಿ ಚಂದ್ರ ಪೂಜಾರಿ, ಆರೋಗ್ಯ ಅಧಿಕಾರಿ ಲಿಲ್ಲಿ ನಾಯರ್, ಕಂದಾಯ ಅಧಿಕಾರಿ ಅಶೋಕ್, ಬ್ರಹ್ಮಕಲಶೋತ್ಸವ ಸಮಿತಿಯ ಕಿಲ್ಪಾಡಿ ಭಂಡಸಾಲೆ ಶೇಖರ್ ಶೆಟ್ಟಿ, ನಾಗಸ್ವರ ವಾದಕ ನಾಗೇಶ್ ಬಪ್ಪನಾಡು, ರಂಗಕರ್ಮಿ ಚಂದ್ರಶೇಖರ ಸುವರ್ಣ, ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಅಕೌಂಟೆಂಟ್ ಶಿವಶಂಕರ್, ಪುರಂದರ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದು, ನೂತನ ವಧು-ವರರಿಗೆ ಶುಭ ಕೋರಿದರು.

ಏಪ್ರಿಲ್ 26 ರಂದು ಸರಕಾರ, ಮುಜರಾಯಿ ಇಲಾಖೆಯ ಮೂಲಕ" ಸಪ್ತಪದಿ" ಸಾಮೂಹಿಕ ವಿವಾಹ ಘೋಷಿಸಿದ್ದು, ಕೊರೊನಾದಿಂದಾಗಿ ಮುಂದೂಡಲ್ಪಟ್ಟಿತ್ತು. ಈ ಹಿಂದೆ ಸುಮಾರು 13 ಜೋಡಿ ವಿವಾಹ ನೋಂದಣಿಯಾಗಿದ್ದು, ಇಂದು ಕೇವಲ ಎರಡೇ ಜೋಡಿ ವಿವಾಹ ನಡೆದಿದೆ. ವಿಶೇಷವೆಂದರೆ ಒಂಭತ್ತು ಮಾಗಣೆಯ ಮುಲ್ಕಿ ಹೋಬಳಿಯ 32 ಗ್ರಾಮಗಳಿಂದ ಯಾವುದೇ ಜೋಡಿಯ ವಿವಾಹ ನೋಂದಣಿಯಾಗಿಲ್ಲ!.

Edited By : Manjunath H D
Kshetra Samachara

Kshetra Samachara

10/12/2020 03:13 pm

Cinque Terre

9.79 K

Cinque Terre

0

ಸಂಬಂಧಿತ ಸುದ್ದಿ