ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು : ಬಿಲ್ಲವ ಬ್ರಿಗೇಡ್ ವತಿಯಿಂದ ನಡೆದ ಬೃಹತ್ ಬೈಕ್ ರಾಲಿಗೆ ಪೊಲೀಸರು ತಡೆ

ಮಂಗಳೂರು : ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರಿಡಬೇಕೆಂದು ಆಗ್ರಹಿಸಿ ಬಿಲ್ಲವ ಬ್ರಿಗೇಡ್ ವತಿಯಿಂದ ನಡೆದ ಬೃಹತ್ ಬೈಕ್ ರಾಲಿಗೆ ಪೊಲೀಸರು ತಡೆ ಒಡ್ಡಿದ ಘಟನೆ ನಡೆದಿದೆ. ಹೀಗಾಗಿ ಬಿಲ್ಲವ ಬ್ರಿಗೇಡ್ ಗೊಂದಲದಿಂದ ಒಮ್ಮೆ ತಬ್ಬಿಬ್ಬಾದ ಘಟನೆ ನಡೆಯಿತು.

ಹೀಗಾಗಿ ಬೈಕ್ ರಾಲಿ ಇಲ್ಲದೇ ಕಾಲ್ನಡಿಗೆಯಲ್ಲೇ ಬಿಲ್ಲವ ಬ್ರಿಗೇಡ್ ಮರವೂರಿನಿಂದ ಕೆಂಜಾರಿನವರೆಗೆ ಘೋಷಣೆ ಕೂಗುತ್ತಾ ಸಾಗಿತು.

ಇದೇ ವೇಳೆ ಕೋಟಿ ಚೆನ್ನಯರ ಹೆಸರಿಡದಿದ್ದರೆ ಹೋರಾಟ ನಿಲ್ಲದು. ತುಳುನಾಡಿನ ಮಹಾಪುರುಷರಾದ ಕೋಟಿ ಚೆನ್ನಯರ ಹೆಸರಿಡಬೇಕು. ರಾಜ್ಯ ಸರ್ಕಾರಕ್ಕೆ ತಲುಪಿಸಿದ ಮನವಿ ಪತ್ರ ಮೂಲೆ ಗುಂಪಾಗಿದೆ. ನಮ್ಮದು ಕೇವಲ‌ ಒಂದು ದಿನದ ಹೋರಾಟ ಅಲ್ಲ‌. ಗೆಲುವು ಸಿಗುವವರೆಗೆ ನಮ್ಮ‌ ಹೋರಾಟ ನಡೆಯುತ್ತಿರುತ್ತದೆ. ಎಷ್ಟೇ ತಡೆ ಬಂದರೂ ಕೂಡ ನಾವು ಹಿಂಜರಿಯೋದಿಲ್ಲ.ಅದಾನಿ ಏರ್ ಪೋರ್ಟ್ ಕೋಟಿ ಚೆನ್ನಯರ ಏರ್ ಪೋರ್ಟ್ ಎಂದು ಹೆಸರು ಬದಲಾಯಿಸುವವರೆಗೆ ನಮ್ಮ ಹೋರಾಟ ನಿಲ್ಲೋದಿಲ್ಲ ಎಂದು ಸತ್ಯಜಿತ್ ಸುರತ್ಕಲ್ ಹೇಳಿದರು.

Edited By : Manjunath H D
Kshetra Samachara

Kshetra Samachara

07/12/2020 02:24 pm

Cinque Terre

21.09 K

Cinque Terre

0

ಸಂಬಂಧಿತ ಸುದ್ದಿ