ಉಡುಪಿ: "ಕಗ್ಗತ್ತಲಲ್ಲಿ ಸಂವಿಧಾನ"; ದಸಂಸ ದಿಂದ ಕಗ್ಗತ್ತಲ ದಿನಾಚರಣೆ
ಉಡುಪಿ: ಸಂವಿಧಾನ ಶಿಲ್ಪಿ , ವಿಶ್ವ ರತ್ನ , ಮಹಾನ್ ಮಾನವತಾವಾದಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 64ನೇ ಪರಿನಿರ್ವಾಣ ದಿನವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ ) ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಇಂದು " ಕಗ್ಗತ್ತಲಲ್ಲಿ ಸಂವಿಧಾನ " ಎಂಬ ಘೋಷವಾಕ್ಯದೊಂದಿಗೆ ಕಗ್ಗತ್ತಲ ದಿನವನ್ನಾಗಿ ಆಚರಿಸಲಾಯಿತು.
ಪರಿನಿರ್ವಾಣ ದಿನದ ಅಂಗವಾಗಿ ಇಂದು ಸಂಜೆ ಉಡುಪಿಯ ಜೋಡುಕಟ್ಟೆಯಿಂದ ಬೋರ್ಡ್ ಹೈಸ್ಕೂಲ್ ವರೆಗೆ ಮೇಣದ ಬತ್ತಿ ಮೆರವಣಿಗೆ ಹಮ್ಮಿಕೊಳ್ಳಲಾಯಿತು.ಉಡುಪಿ ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು, ಕಾರ್ಯಕರ್ತರು, ಪ್ರಗತಿಪರ ಸಂಘಟನೆ ಒಡನಾಡಿಗಳು, ಮುಸ್ಲಿಂ ಒಕ್ಕೂಟದ ಬಂಧುಗಳು, ಕ್ರಿಶ್ಚಿಯನ್ ಒಕ್ಕೂಟದ ಬಂಧುಗಳು ಭಾಗವಹಿಸಿದ್ದರು.
ಕಗ್ಗತ್ತಲ ದಿನದ ರ್ಯಾಲಿಯುದ್ದಕ್ಕೂ ಸಂವಿಧಾನದ ಪರ ಮತ್ತು ಡಾ.ಅಂಬೇಡ್ಕರ್ ಪರ ಕಾರ್ಯಕರ್ತರು ಘೋಷಣೆ ಕೂಗಿದರು.
Kshetra Samachara
06/12/2020 08:03 pm