ಕಾಪು: ಇತಿಹಾಸ ಪ್ರಸಿದ್ಧ ಕಾಪುವಿನ ಮೂರು ಮಾರಿಗುಡಿಗಳಾದ ಹಳೆ ಮಾರಿಯಮ್ಮ ದೇವಸ್ಥಾನ, ಹೊಸ ಮಾರಿಯಮ್ಮ ದೇವಸ್ಥಾನ ಹಾಗೂ ಕಲ್ಯ ಮಾರಿಯಮ್ಮ ದೇವಸ್ಥಾನಗಳಲ್ಲಿ ಏಕಕಾಲದಲ್ಲಿ ತುಳುವರ ಜಾರ್ದೆ ತಿಂಗಳ ಮಾರಿ ಪೂಜಾ ಮಹೋತ್ಸವ ಮಂಗಳವಾರ ರಾತ್ರಿ ಹಾಗೂ ಬುಧವಾರ ಸರಳ ರೀತಿಯಲ್ಲಿ ಜರುಗಿತು.
ಸಿಡುಬು, ಸಂತಾನ ಫಲ, ಮತ್ತೈದೆ ಭಾಗ್ಯಗಳಿಗಾಗಿ ಪ್ರಸಿದ್ಧಿ ಪಡೆದ ಕಾಪುವಿನ ಈ ಮೂರು ಮಾರಿಗುಡಿಗಳಲ್ಲಿ ಮಾರ್ಚ್ ತಿಂಗಳ ಅಂತ್ಯಕ್ಕೆ ಸುಗ್ಗಿ ಮಾರಿ ಪೂಜೆ, ಜುಲೈ ತಿಂಗಳ ಅಂತ್ಯಕ್ಕೆ ಆಷಾಢ ಮಾರಿಪೂಜೆ ಹಾಗೂ ನವೆಂಬರ್ ತಿಂಗಳಾಂತ್ಯದಲ್ಲಿ ಜಾರ್ದೆ ತಿಂಗಳ ಮಾರಿ ಪೂಜೆ ನಡೆಯುತ್ತವೆ.
ಸುಗ್ಗಿ ಹಾಗೂ ಆಷಾಢ ತಿಂಗಳ ಮಾರಿಪೂಜೆಯಲ್ಲಿ ಹೆಚ್ಚಿನ ಭಕ್ತಾದಿಗಳು ಕಾಪುವಿನ ಮಾರಿಗುಡಿಗಳಿಗೆ ಆಗಮಿಸುತ್ತಾರೆ. ಆದರೆ, ಕೋವಿಡ್ ನಿಯಮಾವಳಿ ಕಾರಣದಿಂದಾಗಿ ಈ ಬಾರಿ ಜಾರ್ದೆ ಮಾರಿ ಪೂಜೆಯಲ್ಲಿ ಭಕ್ತಾದಿಗಳ ಸಂಖ್ಯೆ ಕಡಿಮೆ ಇತ್ತು.
ಕಾಪು ಮಾರಿಪೂಜೆಯಲ್ಲಿ ಕುರಿ ಹಾಗೂ ಕೋಳಿಗಳ ಬಲಿ ನಡೆಯುತ್ತದೆ. ಆದರೆ, ಈ ಬಾರಿ ಕೊರೊನಾದಿಂದಾಗಿ ಕುರಿ, ಕೋಳಿ ಬಲಿ ನೀಡುವುದನ್ನು ನಿಷೇಧಿಸಲಾಗಿದೆ. ಆದ್ದರಿಂದ ಭಕ್ತರ ಸಂಖ್ಯೆಯೂ ವಿರಳವಾಗಿತ್ತು.
Kshetra Samachara
25/11/2020 08:14 pm