ಮಂಗಳೂರು: ಮಸೂದ್ ಎಜುಕೇಷನಲ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ಸಂಸ್ಥಾಪಕ, ಮಾಜಿ ಎಂಎಲ್ಸಿ ಹಾಜಿ ಕೆಎಸ್ ಮಹಮ್ಮದ್ ಮಸೂದ್ ಅವರ "ಸಂತೃಪ್ತಿಯ ಜೀವನ ಪಯಣ" ಆತ್ಮಕಥನ ಪುಸ್ತಕ ಬಿಡುಗಡೆ ಕಾರ್ಯಕ್ರಮ ಕದ್ರೋಳಿಯಲ್ಲಿರುವ ಅವರ ಸ್ವಗೃಹದಲ್ಲಿ ನಡೆಯಿತು. ಆತ್ಮಕಥನ ಪುಸ್ತಕ ಬಿಡುಗಡೆಯನ್ನು ಕೆಎಸ್ ಮಹಮ್ಮದ್ ಮಸೂದ್ ಅವರ ಮೊಮ್ಮಗ ಮಹಮ್ಮದ್ ಉಮೈರ್ ಆರೀಫ್ ನೆರವೇರಿಸಿದರು. ಬಳಿಕ ಮಾತನಾಡಿದ ಕೆಎಸ್ ಮಹಮ್ಮದ್ ಮಸೂದ್ ತನ್ನ ಜೀವನದಲ್ಲಿ ನಡೆದ ಘಟನೆಗಳ ಬಗ್ಗೆ ಮಾಹಿತಿ ನೀಡಿದರು. ಮಾಜಿ ಶಾಸಕ ಜೆಆರ್ ಲೋಬೊ ಮಾತನಾಡಿ, "ಮಸೂದ್ ಅವರ ಜೀವನದಲ್ಲಿ ಕೇವಲ ರಾಜಕೀಯ ನೋಡದೇ ಜನ ಸೇವೆಯಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಅದರಂತೆ ಜಿಲ್ಲೆಯ ಜನರಿಗೆ ಮಸೂದ್ ಅವರ ಕೊಡುಗೆ ಅಪಾರವಾಗಿದೆ" ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮೂಡಾ ಮಾಜಿ ಅಧ್ಯಕ್ಷ ಕೋಡಿಜಾಲ್ ಇಬ್ರಾಹಿಂ, ಸ್ಥಳೀಯ ಕಾರ್ಪೊರೇಟರ್ ಶಂಶುದ್ದೀನ್ ಕುದ್ರೋಳಿ, ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಹಾಜಿ ಬಿಎಚ್ ಅಬ್ದುಲ್ ಖಾದರ್, ಮುಸ್ಲಿಂ ಸೆಂಟ್ರಲ್ ಕಮೀಟಿ ಉಪಾಧ್ಯಕ್ಷ ಹಾಜಿ ಕೆ ಎಸ್ ಇಮ್ತಿಯಾಝ್ ಕಾರ್ಕಳ, ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಮಾಜಿ ಅಧ್ಯಕ್ಷ ಹಾಜಿ ಎಸ್ಎಂ ಸಿರಾಜ್, ಮಸೂದ್ ಅವರ ಪುತ್ರ ಡಾ.ಆರೀಫ್ ಮಸೂದ್ ಮತ್ತಿತರರು ಉಪಸ್ಥಿತರಿದ್ದರು...
Kshetra Samachara
08/11/2020 12:13 pm