ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ ಬಿಜೆಪಿ ಕಚೇರಿಯಲ್ಲಿ ಶಾರದಾ ಪೂಜೆ ಸಂಪನ್ನ

ಉಡುಪಿ: ಭಾರತೀಯ ಜನತಾ ಪಾರ್ಟಿ ಉಡುಪಿ ಇವರ ಆಶ್ರಯದಲ್ಲಿ ಉಡುಪಿ ಜಿಲ್ಲಾ ಬಿ.ಜೆ.ಪಿ ಕಛೇರಿಯಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಶಾರದಾ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು.ಭಾರತೀಯ ಜನತಾ ಪಾರ್ಟಿ ಉಡುಪಿ ನಗರದ ಅಧ್ಯಕ್ಷರಾದ ಮಹೇಶ್ ಠಾಕೂರ್ ಶಾಸಕರಾದ ರಘುಪತಿ ಭಟ್ ಮತ್ತು ಬಿ.ಜೆ.ಪಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ನೇತೃತ್ವದಲ್ಲಿ ಶಾರದಾ ಪೂಜೆ ನಡೆಯಿತು.ಈ ವೇಳೆ ಬಿ.ಜೆ.ಪಿ ನಾಯಕರು ಶಾರದಾ ದೇವಿಯ ಮೂರ್ತಿಗೆ ದೀಪ ಪ್ರಜ್ವಲನೆ ಮಾಡಿದರು.

ನವರಾತ್ರಿ ಹಬ್ಬದ ಕುರಿತು ನಗರ ಪ್ರಾಧಿಕಾರದ ಅಧ್ಯಕ್ಷರಾದ ರಾಘವೆಂದ್ರ ಕಿಣಿಯವರು ಮಾತನಾಡಿ ಇಂದು ಕಾತ್ಯಾಯಿನಿ ದೇವಿಯನ್ನು ಆರಾಧನೆ ಮಾಡುವ ಪುಣ್ಯದಿನ.ಪ್ರಥಮವಾಗಿ ಬಿ.ಜೆ.ಪಿ ಯ ಕಚೇರಿಯಲ್ಲಿ ಪ್ರಥಮ ವರ್ಷದ ಶಾರದಾ ಉತ್ಸವ ಮಾಡುತ್ತಿರುವುದು ಬಹಳ ಹೆಮ್ಮೆ ತರುವಂತಾಗಿದೆ.ಇದು ಪ್ರತೀ ವರ್ಷ ಹೀಗೆ ಮುಂದು ವರೆಯಬೇಕು ಎಂದರು.

ಇದೇ ಸಂದರ್ಭದಲ್ಲಿ ದೇವಾಲಯಗಳಲ್ಲಿ ಸೇವೆ ಸಲ್ಲಿಸಿದ ಹಾಗೂ ಕೆಲಸ ಮಾಡಿದ ಸಿಬ್ಬಂದಿಯವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬಿ.ಜೆ.ಪಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ಪೂರ್ಣಿಮಾ ಸುರೇಶ್,ಮಂಗಳೂರು ನಗರದ ಪ್ರಭಾರಿಗಳಾದ ಉದಯಕುಮಾರ್ ಶೆಟ್ಟಿ,ಮಹಿಳಾ ಮೊರ್ಚಾದ ವೀಣಾ ಶೆಟ್ಟಿ,ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ ಬಾಬು,ಉಪಾಧ್ಯಕ್ಷೆ ಶೀಲಾ ಕೆ,ಶೆಟ್ಟಿ ಮತ್ತಿತರ ನಾಯಕರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

22/10/2020 10:09 pm

Cinque Terre

11.77 K

Cinque Terre

1

ಸಂಬಂಧಿತ ಸುದ್ದಿ