ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಲ್ಲೂರು ಶ್ರೀ ಮೂಕಾಂಬಿಕೆ ದರ್ಶನ ಪಡೆದ ಕಾಳಿಚರಣ್‌ ಮಹಾರಾಜ್‌: ಜಗನ್ಮಾತೆಯ ಸನ್ನಿಧಿಯಲ್ಲಿ ಸ್ತೋತ್ರ ಪಠಣ

ಕುಂದಾಪುರ: ಕೊಲ್ಲೂರು ಶ್ರೀ ಮೂಕಾಂಬಿಕೆಯ ಸನ್ನಿಧಾನಕ್ಕೆ ಆಗಮಿಸಿದ ಕಾಳಿ ಚರಣ್ ಮಹಾರಾಜ್ ಅವರು ಜಗನ್ಮಾತೆಯ ದರ್ಶನ ಪಡೆದರು.

ಈ ಸಂದರ್ಭ ಮಾತನಾಡಿದ ಅವರು, ಯಾವುದೆ ರೀತಿಯ ಜಾತಿ ಹಾಗೂ ಭಾಷಾ ವಾದ ಸರಿಯಲ್ಲ. ಭಾರತ ಮಾತೆಯ ಚರಣಾರವಿಂದಗಳಲ್ಲಿ ಸಮಸ್ತ ಹಿಂದೂಗಳು ಒಂದೇ ಎನ್ನುವ ಭಾವನೆ ಇರಬೇಕು. ಜಾತಿವಾದಗಳಿಂದಲೇ ಲೈಂಗಿಕ ದೌರ್ಜನ್ಯ ದಂತಹ ದುಷ್ಕೃತ್ಯ ನಡೆಯುತ್ತದೆ.

ವರ್ಣಗಳಿಂದ ಜಾತಿ ಗುರುತಿಸುವುದರಿಂದ ಹಾಗೂ ವರ್ಗ ಸಂಘರ್ಷಗಳಿಂದ ಏನನ್ನೂ ಸಾಧಿಸಲು ಆಗೋದಿಲ್ಲ. ಜಾತಿ ಹಾಗೂ ವರ್ಗದ ವಿಭಾಜಕ ಬಿಟ್ಟು, ಧರ್ಮದ ನೆಲೆಯಲ್ಲಿ ಹಿಂದೂಗಳು ಒಂದೇ ಎನ್ನುವ ಭಾವನೆ ಜಾಗೃತವಾಗುವುದರಿಂದ ಭಾರತ ಹಿಂದೂ ರಾಷ್ಟ್ರವಾಗಿ ಪ್ರಜ್ವಲಿಸಲಿದೆ. ಹಿಂದೂ ಧರ್ಮದ ಜಾಗೃತಿಗಾಗಿ ನಮ್ಮ ಪರ್ಯಟನೆ ನಡೆಯುತ್ತಿದೆ ಎಂದರು.

Edited By : Manjunath H D
Kshetra Samachara

Kshetra Samachara

21/10/2020 10:18 pm

Cinque Terre

24.84 K

Cinque Terre

0

ಸಂಬಂಧಿತ ಸುದ್ದಿ