ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಬಾವಿಗೆ ಹಾರಿದ ಯುವತಿ; ಅಗ್ನಿಶಾಮಕದಳ ಸಿಬ್ಬಂದಿಯಿಂದ ರಕ್ಷಣೆ

ಮೂಡುಬಿದಿರೆ: ವಿಶಾಲನಗರದ ನಿವಾಸಿ ಯುವತಿಯೋರ್ವಳು ಬಾವಿಗೆ ಹಾರಿ ಆತ್ಮಹತ್ಯೆ ಯತ್ನಿಸಿದ್ದಾಳೆ. ಯುವತಿಯನ್ನು ಮೂಡುಬಿದಿರೆ ಅಗ್ನಿಶಾಮಕದಳ ಸಿಬಂದ್ದಿ ರಕ್ಷಿಸಿದ ಘಟನೆ ನಡೆದಿದೆ. ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಾಂತ್ಯದಲ್ಲಿ ನಡೆದಿದೆ.

ತಮಿಳುನಾಡು ಮೂಲದ ವಿಶಾಲ್ ನಗರದ ನಿವಾಸಿ ರಾಬಿತ್ ಎಂಬವರ ಪುತ್ರಿ 22ರ ಹರೆಯದ ನಿವೇತಾ ಬಾವಿಗೆ ಹಾರಿದ ಯುವತಿ.

ಈಕೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇಂದು ಬೆಳಗಿನ ವೇಳೆ ಪ್ರಾಂತ್ಯದ ಬಳಿ ಇರುವ 25 ಅಡಿ ಆಳದ ಬಾವಿಯೊಂದಕ್ಕೆ ಹಾರಿದ್ದಾರೆ.

ಆಗ ಪಕ್ಕದ ಮನೆಯವರು ಗಮನಿಸಿ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಹಾಯಕ ಠಾಣಾಧಿಕಾರಿ ಸ್ಟೀಫನ್ ಡಿ'ಸಿಲ್ವ ಅವರ ನೇತೃತ್ವದಲ್ಲಿ ಅಗ್ನಿಶಾಮಕ ಹಾಗೂ ಗೃಹರಕ್ಷಕ ದಳ ಸಿಬ್ಬಂದಿ ಯುವತಿಯನ್ನು ಬಾವಿಯಿಂದ ಮೇಲಕ್ಕೆತ್ತಿ ರಕ್ಷಿಸಿದ್ದಾರೆ. ಅದೃಷ್ಟವಶಾತ್ ಯುವತಿ ಪ್ರಾಣಾಪಾಯದಿಂದ ಬಚಾವ್‌ ಆಗಿದ್ದಾಳೆ.

Edited By : Manjunath H D
Kshetra Samachara

Kshetra Samachara

11/10/2022 05:09 pm

Cinque Terre

7.56 K

Cinque Terre

1

ಸಂಬಂಧಿತ ಸುದ್ದಿ