ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಸರಕಾರಿ ಕಾಲೇಜಿನಲ್ಲಿ ಕಳ್ಳತನ

ಮುಲ್ಕಿ: ಇಲ್ಲಿನ ಸರಕಾರಿ ಕಾಲೇಜಿಗೆ ಕಳ್ಳರು ನುಗ್ಗಿ ಕಪಾಟು ಹಾಗೂ ಮೇಜಿನ ಡ್ರಾಯರ್ ಜಾಲಾಡಿ ಕಳ್ಳತನ ಮಾಡಿದ್ದಾರೆ. ಸರಕಾರಿ ಕಾಲೇಜಿನ ಎದುರು ಬಾಗಿಲಿನ ಬೀಗ ಮುರಿದು ಬಳಿಕ ಪ್ರಾಂಶುಪಾಲರ ಕೋಣೆಯ ಬೀಗ ಒಡೆದು ಕಪಾಟನ್ನು ಭಾರವಾದ ಸಾಧನದಿಂದ ಒಡೆದು ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಹಣಕ್ಕಾಗಿ ಜಾಲಾಡಿದ್ದಾರೆ.

ಅದೇ ರೀತಿ ಪ್ರೌಢಶಾಲೆಯ ಶಿಕ್ಷಕರ ಕೊಠಡಿಯ ಕಪಾಟು ಹಾಗೂ ಮೇಜಿನ ಡ್ರಾವರ್ ಭಾರವಾದ ಸಾಧನದಿಂದ ಒಡೆದು ಜಾಲಾಡಿದ್ದಾರೆ

ಪ್ರಾಂಶುಪಾಲರ ಕೊಠಡಿಯ ಕಪಾಟಿನಿಂದ ಸುಮಾರು 3000 ರೂ ಹಣವನ್ನು ಕಳ್ಳತನ ಮಾಡಿದ್ದಾರೆ.

ಕಳ್ಳರು ಸುಮಾರು 15 ಕಪಾಟು ಹಾಗೂ ಮೇಜಿನ ಡ್ರಾವರ್ ಭಾರವಾದ ಸಾಧನದಿಂದ ಹಾನಿ ಮಾಡಿದ್ದು ಕಾಲೇಜಿಗೆ ಬಾರಿ ನಷ್ಟ ಉಂಟಾಗಿದೆ. ವಿಶೇಷವೆಂದರೆ ಶಿಕ್ಷಕರ ಕೋಣೆಯಲ್ಲಿ ಇರಿಸಿದ್ದ ಲ್ಯಾಪ್‌ಟಾಪ್ ಹಾಗೂ ಕಂಪ್ಯೂಟರ್‌ಗಳನ್ನು ಹಾಗೆ ಬಿಟ್ಟು ಹೋಗಿದ್ದಾರೆ. ಕಾಲೇಜಿನ ಪ್ರಾಂಶುಪಾಲ ವಾಸುದೇವ ಬೆಳ್ಳೆ ನೀಡಿದ ದೂರಿನಂತೆ ಮುಲ್ಕಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Edited By : Abhishek Kamoji
Kshetra Samachara

Kshetra Samachara

27/09/2022 09:54 pm

Cinque Terre

7.52 K

Cinque Terre

0

ಸಂಬಂಧಿತ ಸುದ್ದಿ