ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕರಾವಳಿಯಲ್ಲಿ "ಕಳ್ಳಿಯರ" ಕಮಾಲ್: ಇನ್ನೊಂದು ವಿಡಿಯೋ ವೈರಲ್ !

ಉಡುಪಿ: ಕೆಲ ದಿನಗಳ ಹಿಂದೆ ಖಾಸಗಿ ಬಸ್ ವೊಂದರಲ್ಲಿ ಮಹಿಳೆಯೊಬ್ಬರು ಬಸ್‌ನಿಂದ ಇಳಿಯುತ್ತಿದ್ದ‌ ಮಹಿಳೆಯ ಪರ್ಸ್ ಎಗರಿಸುತ್ತಿರುವ ಸಿಸಿ ಕ್ಯಾಮೆರಾ ದೃಶ್ಯ ವೈರಲ್ ಆಗಿತ್ತು. ಇದೀಗ ಅಂತಹದ್ದೇ ಕೈ ಚಳಕದ ವಿಡಿಯೋ ವೈರಲ್ ಆಗುತ್ತಿದೆ.

ಖಾಸಗಿ ಬಸ್‌ನಲ್ಲಿ ಡ್ರೈವರ್‌ನ ಹಿಂಬದಿ ಸೀಟಿನಲ್ಲಿ ಪ್ರಯಾಣಿಸುತ್ತಿರುವ ಮಹಿಳೆ ನಿಂತು ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯ ಪರ್ಸ್‌ಅನ್ನು ತನ್ನ ಕೈಚಳದ ಮೂಲಕ ಅನಾಮತ್ತಾಗಿ ಎಗರಿಸಿದ್ದಾಳೆ. ಬಳಿಕ ಬಗ್ಗಿ ತಮ್ಮ ಚೀಲದೊಳಗೆ ಹಾಕಿಕೊಂಡಿದ್ದಾಳೆ. ಸದ್ಯ ಈ ವಿಡಿಯೋ "ಬಸ್‌ನಲ್ಲಿ ಸಂಚರಿಸುವ ಪ್ರಯಾಣಿಕರು ಜಾಗರೂಕತೆ ವಹಿಸಬೇಕು" ಎಂಬ ಒಕ್ಕಣೆಯೊಂದಿಗೆ ವಾಟ್ಸಾಪ್‌ನಲ್ಲಿ ಹರಿದಾಡುತ್ತಿದೆ.

Edited By : Manjunath H D
PublicNext

PublicNext

27/09/2022 09:45 pm

Cinque Terre

53.04 K

Cinque Terre

3

ಸಂಬಂಧಿತ ಸುದ್ದಿ