ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲ: ಅನುಮತಿ ಇಲ್ಲದೆ ಬೀಚ್ ಫೆಸ್ಟಿವಲ್ ಗೆ ತಯಾರಿ!; ದಸರಾ ಸಂಭ್ರಮ ಕಸಿಯಲು ಕಿತಾಪತಿ?

ಉಳ್ಳಾಲ: ಯಾವುದೇ ಅನುಮತಿ ಇಲ್ಲದೆ ಖಾಸಗಿ ವ್ಯಕ್ತಿಯೋರ್ವ ಉಳ್ಳಾಲದಲ್ಲಿ ತಿಂಗಳ ಕಾಲ ಬೀಚ್ ಫೆಸ್ಟಿವಲ್ ನಡೆಸಲು ಹಠ ತೊಟ್ಟಿದ್ದು, ಇದು ಉಳ್ಳಾಲ ದಸರಾ ಮಹೋತ್ಸವ ಹಾಳುಗೆಡವಲು ಯೋಜಿಸಿರುವ ಷಡ್ಯಂತ್ರ ಎಂದು ಆರೋಪಿಸಿ ಹಿಂದೂ ಕಾರ್ಯಕರ್ತರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.

ಫಾರೂಕ್ ಯಾನೆ ಮಾನ ಫಾರೂಕ್ ಎಂಬಾತ ಉಳ್ಳಾಲ ಕಡಲ ಕಿನಾರೆಯಲ್ಲಿ ಒಂದು ತಿಂಗಳ ಕಾಲ ಬೀಚ್ ಫೆಸ್ಟಿವಲ್ ನಡೆಸಲು ಮುಂದಾಗಿದ್ದು, ಇದಕ್ಕಾಗಿ ನೂರಕ್ಕೂ ಹೆಚ್ಚು ಸ್ಟಾಲ್ ಗಳನ್ನು ನಿರ್ಮಿಸಲು ಕಾಮಗಾರಿ ನಡೆಸುತ್ತಿದ್ದಾನೆ. ಕಡಲ ಕಿನಾರೆಯಲ್ಲಿರುವ ಖಾಸಗಿ ಜಮೀನನ್ನು ಲೀಸ್ ಗೆ ಪಡೆದಿರುವ ಫಾರೂಕ್, ಹತ್ತಿರದ ಹಿಂದೂ ರುದ್ರಭೂಮಿಗೆ ಸೇರಿರುವ ಜಾಗವನ್ನೂ ಅತಿಕ್ರಮಿಸಿ ಅನಧಿಕೃತವಾಗಿ ಸ್ಟಾಲ್ ಗಳನ್ನು ನಿರ್ಮಿಸಿ ಬೀಚ್ ಉತ್ಸವಕ್ಕೆ ಸಿದ್ಧತೆ ನಡೆಸುತ್ತಿದ್ದಾನೆಂದು ಆರೋಪಿಸಲಾಗಿದೆ.

ಈ ಬೀಚ್ ಫೆಸ್ಟಿವಲ್ ಗೆ ಅನುಮತಿ ನೀಡಬಾರದೆಂದು ಉಳ್ಳಾಲ ಮೊಗವೀರ ಸಂಘ ಮತ್ತು ಹಿಂದೂ ರುದ್ರಭೂಮಿಯ ಶವ ಸಂಸ್ಕಾರ ಸಮಿತಿಯವರು ಉಳ್ಳಾಲ ನಗರಾಡಳಿತ ಮತ್ತು ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ. ನಗರಸಭೆ ಆಯುಕ್ತರಾದ ವಿದ್ಯಾ ಕಾಳೆ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿ ಹಾಕಲಾಗಿದ್ದ ಬೀಚ್ ಫೆಸ್ಟಿವಲ್ ಬ್ಯಾನರನ್ನು ತೆರವುಗೊಳಿಸಿದ್ದಲ್ಲದೆ ಸಿದ್ಧತಾ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ.

ಈ ಬಾರಿ ಉಳ್ಳಾಲ ದಸರಾ ಅಮೃತ ಮಹೋತ್ಸವ ಆಚರಿಸುತ್ತಿದ್ದು, ಸ್ಥಳೀಯರಲ್ಲಿ ಸಡಗರ ಮನೆ ಮಾಡಿದೆ. ಈ ಹೊತ್ತಲ್ಲೇ ಫಾರೂಕ್ ಸೆ.30ರಿಂದ ಅ.30ರ ವರೆಗೆ ಬೀಚ್ ಫೆಸ್ಟಿವಲ್ ನಡೆಸಲು ಸಜ್ಜುಗೊಂಡಿರುವುದು ಉಳ್ಳಾಲದ ಹಿಂದೂ ಕಾರ್ಯಕರ್ತರನ್ನು ಆಕ್ರೋಶಿತರನ್ನಾಗಿಸಿದೆ. ಮಾತ್ರವಲ್ಲದೆ, ಜಾಲತಾಣಗಳಲ್ಲಿಯೂ ವಿರೋಧ ವ್ಯಕ್ತಪಡಿಸಿದ್ದಾರೆ.

Edited By : Shivu K
PublicNext

PublicNext

25/09/2022 04:31 pm

Cinque Terre

50.3 K

Cinque Terre

4

ಸಂಬಂಧಿತ ಸುದ್ದಿ