ಬೈಂದೂರು: ಮೀನುಗಾರಿಕೆ ನಡೆಸಲು ಸಮುದ್ರಕ್ಕೆ ತೆರಳಿದ್ದ ಮೀನುಗಾರ ರೊಬ್ಬರು ಸಮುದ್ರ ಪಾಲಾದ ಘಟನೆ ಸಂಭವಿಸಿದೆ. ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಮಲ್ಯರ ಬೆಟ್ಟು ನಿವಾಸಿಯಾದ ವೆಂಕಟೇಶ್ ಖಾರ್ವಿ ಅವರು ಮೀನುಗಾರಿಕೆಗೆ ತೆರಳಿದ್ದಾಗ ಅಕಸ್ಮಾತ್ತಾಗಿ ಸಮುದ್ರಕ್ಕೆ ಬಿದ್ದಿದ್ದಾರೆ. ವಿಷಯ ತಿಳಿದ ಗಂಗೊಳ್ಳಿ ಆಪತ್ಭಾಂದವ ಮುಳುಗು ತಜ್ಞ ದಿನೇಶ್ ಖಾರ್ವಿ ಅವರು ಶೋಧ ಕಾರ್ಯ ನಡೆಸಿ ಸಮುದ್ರ ಪಾಲಾಗುತ್ತಿರುವ ಮೃತ ದೇಹವನ್ನು ಹೊರತೆಗೆಯುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
Kshetra Samachara
23/09/2022 12:05 pm