ಉಡುಪಿ: ಬಸ್ಸಿಳಿಯುವ ಧಾವಂತದಲ್ಲಿದ್ದ ಮಹಿಳೆಯೊಬ್ಬರ ಪರ್ಸ್ ನ್ನು ಮತ್ತೋರ್ವ ಮಹಿಳೆ ಎಗರಿಸಿದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ವೈರಲ್ ಆಗುತ್ತಿದೆ. ಕರಾವಳಿಯಲ್ಲಿ ಈ ಪ್ರಸಂಗ ನಡೆದಿದ್ದು ಜನರು ವಾಟ್ಸಾಪ್ ಮೂಲಕ ಫೂಟೇಜ್ ಶೇರ್ ಮಾಡುತ್ತಿದ್ದಾರೆ.ಮಹಿಳೆಯೊಬ್ವರು ಬಸ್ಸಿಳಿಯುವಾಗ ,ಅದೇ ಬಸ್ ನಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಮಹಿಳೆಯೊಬ್ವರು ಬ್ಯಾಗ್ ಗೆ ಕೈ ಹಾಕಿ ಅದರಲ್ಲಿದ್ದ ಪರ್ಸ್ ನ್ನು ಎಗರಿಸಿದ್ದಾರೆ.
ಇಳಿಯುವ ಧಾವಂತದಲ್ಲಿದ್ದ ಮಹಿಳೆಗೆ ಇದು ಗೊತ್ತಾಗಲೇ ಇಲ್ಲ. ಬಸ್ ನಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ಈ ಎಲ್ಲ ದೃಶ್ಯ ಸೆರೆಯಾಗಿದೆ.ಇದೀಗ ಪರ್ಸ್ ಕಳೆದುಕೊಂಡ ಮಹಿಳೆ ದೂರು ದಾಖಲಿಸಿದ್ದು ಕಳ್ಳತನ ಮಾಡಿದ ಮಹಿಳೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
PublicNext
20/09/2022 05:44 pm