ಉಳ್ಳಾಲ: ಪೋಷಕರ ಮೇಲಿನ ವೈಯಕ್ತಿಕ ದ್ವೇಷದಿಂದ ಉಸ್ತಾದನೋರ್ವ ಮದರಸದ ಅಪ್ರಾಪ್ತ ವಿದ್ಯಾರ್ಥಿಗೆ ಬೆತ್ತದಲ್ಲಿ ಬಾಸುಂಡೆ ಬರೋ ಹಾಗೆ ಥಳಿಸಿದ್ದು ನೊಂದ ಬಾಲಕನ ತಂದೆ ಕೊಣಾಜೆ ಠಾಣೆಗೆ ದೂರು ನೀಡಿದ್ದಾರೆ.
ಹರೇಕಳ ಗ್ರಾಮದ ದೇರಿಕಟ್ಟೆಯ, ಮಸ್ಜಿದ್ ಹುದಾ ಮದರಸದಲ್ಲಿ ನಿನ್ನೆ ಸಂಜೆ 11 ರ ಪ್ರಾಯದ ಅಪ್ರಾಪ್ತ ಬಾಲಕನೋರ್ವನಿಗೆ ಉಸ್ತಾದನಾದ ಯಹ್ಯಾ ಪೈಝಿ ಎಂಬಾತ ಬಾಸುಂಡೆ ಬರೋ ರೀತಿ ಥಳಿಸಿದ್ದಾಗಿ ಆರೋಪಿಸಿ ಕೊಣಾಜೆ ಠಾಣೆಯಲ್ಲಿ ನೊಂದ ಬಾಲಕನ ತಂದೆ ದೂರು ನೀಡಿದ್ದಾರೆ.
ಮದರಸದ ಆಡಳಿತ ಕಮಿಟಿಯ ಅಧ್ಯಕ್ಷರಾದ ಇಸ್ಮಾಯಿಲ್ ಮತ್ತು ಕಾರ್ಯದರ್ಶಿ ಬಶೀರ್ ಎಂಬವರಿಗೆ ಹಲ್ಲೆಗೊಳಗಾದ ಬಾಲಕನ ತಂದೆ ಮಹಮ್ಮದ್ ಮೇಲೆ ವೈಯಕ್ತಿಕ ದ್ವೇಷವಿದ್ದು ಅದನ್ನ ಉಸ್ತಾದ್ ಯಹ್ಯಾ ಮುಖೇನ ತೀರಿಸಿದ್ದಾರೆಂದು ಮಹಮ್ಮದ್ ಆರೋಪಿಸಿದ್ದಾರೆ.
ಆರೋಪಿ ಉಸ್ತಾದ್ ಯಹ್ಯಾ ಫೈಝಿ ಬಾಲಕನ ಕೈ ,ಕಾಲುಗಳಿಗೆ ನಾಗರ ಬೆತ್ತದಲ್ಲಿ ಬಾಸುಂಡೆ ಬರೋ ರೀತಿಯಲ್ಲಿ ಹಲ್ಲೆಗೈದಿದ್ದಾನೆ.ಹಲ್ಲೆಗೊಳಗಾದ ಬಾಲಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾನೆ. ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿ ಉಸ್ತಾದನ ಬಂಧನಕ್ಕೆ ಬಲೆ ಬೀಸಿದ್ದಾರೆ.
Kshetra Samachara
18/09/2022 04:57 pm